Advertisement

ಮಾಸ್ಕೊ ವುಶು: ಸ್ವರ್ಣ ಪದಕ ಗೆದ್ದ ಸದಿಯಾ ತಾರಿಖ್‌

10:58 PM Feb 26, 2022 | Team Udayavani |

ಹೊಸದಿಲ್ಲಿ: ಭಾರತದ ಸದಿಯಾ ತಾರಿಖ್‌ “ಮಾಸ್ಕೊ ವುಶು ಸ್ಟಾರ್ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

Advertisement

ರಷ್ಯಾ ರಾಜಧಾನಿಯಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಅವರು ಸ್ಥಳೀಯ ಆಟಗಾರ್ತಿಯೊಬ್ಬರನ್ನು ಪರಾ ಭವಗೊಳಿಸಿದರು.

ಶ್ರೀನಗರದವರಾದ ಸದಿಯಾ ತಾರಿಖ್‌ ರಾಷ್ಟ್ರೀಯ ಜೂನಿಯರ್‌ ವುಶು ಸ್ಪರ್ಧೆಯಲ್ಲಿ ಎರಡು ಸಲ ಚಿನ್ನದ ಪದಕ ಗೆದ್ದ ಸಾಧಕಿ.

ಈಕೆಯ ತಂದೆ ತಾರಿಖ್‌ ಲೋನ್‌ “ಇಂಡಿಯಾ ಟುಡೇ’ಯ ಶ್ರೀನಗರ ವಿಭಾಗದ ಕ್ಯಾಮರಾಮನ್‌ ಆಗಿದ್ದು, ಮಗಳ ಸಾಧನೆ ನಿರೀಕ್ಷಿತ ಎಂದು ಪ್ರತಿಕ್ರಿಯಿಸಿದ್ದಾರೆ. ಅಥೇನ್ಸ್‌ ಒಲಿಂಪಿಕ್ಸ್‌ ಪದಕ ವಿಜೇತ ಸಾಧಕ, ಮಾಜಿ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಠೊಡ್‌ ಸದಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಸ್ಕೊ ಕೂಟದಲ್ಲಿ ಭಾರತದ ಜೂನಿಯರ್‌ ಮತ್ತು ಸೀನಿಯರ್‌ ತಂಡಗಳು ಪಾಲ್ಗೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next