Advertisement
ಜಾಗತಿಕ ಮಾರುಕಟ್ಟೆಯಲ್ಲಿ ಭಾರತವೂ ದೈತ್ಯ ಶಕ್ತಿ ಯಾಗಿ ರುವುದರಿಂದ ಇಂಥ ಸಂದರ್ಭದಲ್ಲಿ ವಿಶ್ವದ ಆರ್ಥಿಕ ಸ್ಥಿತಿಯ ಪುನರುತ್ಥಾನವನ್ನು ಭಾರತದೊಂದಿಗೆ ತಳುಕು ಹಾಕುವುದು ಔಚಿತ್ಯಪೂರ್ಣ. ಈ ಸಾಂಕ್ರಾ ಮಿಕ ಕಾಲಘಟ್ಟವು ಭಾರತದ ಫಾರ್ಮಸಿ ಕ್ಷೇತ್ರದ ಶಕ್ತಿಯನ್ನು ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟಿದೆ. ಕಡಿಮೆ ಬೆಲೆಯಲ್ಲಿ ಪರಿಣಾಮಕಾರಿ ಔಷಧಗಳನ್ನು ತಯಾರಿಸುವ ಬಗೆ ಯನ್ನು ವಿಶ್ವಕ್ಕೆ ತೋರಿಸಿಕೊಡುವ ಮೂಲಕ ಭಾರತವು ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಹೊಸ ದಿಕ್ಕನ್ನು ತೋರಿಸಿ ಕೊಟ್ಟಿದೆ ಎಂದು ಪ್ರಧಾನಿ ಮೋದಿ “ಇಂಡಿಯಾ ಗ್ಲೋಬಲ್ ವೀಕ್ 2020′ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ತಿಳಿಸಿದ್ದಾರೆ.
Related Articles
Advertisement
ಆರ್ಥಿಕಾಭಿವೃದ್ಧಿಗೆ ಸರಕಾರವು ಪ್ಯಾಕೇಜುಗಳನ್ನು ಘೋಷಿಸಿದ ಬೆನ್ನಿಗೇ ಆರ್ಥಿಕತೆ ಚಿಗುರೊಡೆಯುತ್ತಿದೆ. ಇದು ಅತಿಶಯೋಕ್ತಿಯಲ್ಲ, ಭಾರತೀಯರ ಶ್ರಮದ ಫಲ ಎಂದಿದ್ದಾರೆ.
ಭಾರತದಲ್ಲಿ ಹೂಡಿಕೆಗೆ ಆಹ್ವಾನಭಾರತದಲ್ಲಿ ಹೂಡಿಕೆ ಮಾಡುವ ಸುವರ್ಣಾವ ಕಾಶ ತೆರೆದುಕೊಂಡಿದೆ. ಹೂಡಿಕೆ ಮಾಡಲು ಭಾರತ ನೀಡುವಷ್ಟು ಅನುಕೂಲ ಮತ್ತು ಅವಕಾಶಗಳನ್ನು ವಿಶ್ವದ ಯಾವುದೇ ರಾಷ್ಟ್ರ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿ ಆರು ವರ್ಷಗಳಲ್ಲಿ ಉದ್ಯಮ ಶೀಲತೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಉದ್ಯಮಸ್ನೇಹಿ ವಾತಾವರಣ, ತೆರಿಗೆಗಳಲ್ಲಿ ಗಣನೀಯ ಸುಧಾರಣೆ ಇವೇ ಮುಂತಾದ ಕ್ರಮ ಗಳನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಸಾಂಕ್ರಾಮಿಕದಿಂದಾಗಿ ಕಂಗೆಟ್ಟಿದ್ದ ಭಾರತೀಯ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳಿಗೆ ಸೂಕ್ತವಾದ ಪ್ಯಾಕೇಜು ಗಳನ್ನು ಸರಕಾರ ಪ್ರಕಟಿಸಿದೆ. ರಕ್ಷಣ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಿಸಲಾಗಿದೆ. ಬಾಹ್ಯಾ ಕಾಶ ತಂತ್ರಜ್ಞಾನ ಕ್ಷೇತ್ರದಲ್ಲೂ ಖಾಸಗಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಸದ್ಬಳಕೆ ಮಾಡಿ ಕೊಂಡು ವಿದೇಶಿ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.