Advertisement

ಭಾರತದ ಪ್ರಯತ್ನಕ್ಕೆ ಸಿಗುತ್ತಿದೆ ಫ‌ಲ

06:00 AM Apr 21, 2018 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳು ಫ‌ಲ ನೀಡುತ್ತಿವೆ. ಆದರೆ ಅಭಿವೃದ್ಧಿಯನ್ನು ಸುಸ್ಥಿರಗೊಳಿಸಲು ಇನ್ನಷ್ಟು ಪ್ರಯತ್ನ ಬೇಕಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಉಪ ವ್ಯವಸ್ಥಾಪಕ ನಿರ್ದೇಶಕ ಡೇವಿಡ್‌ ಲಿಪ್ಟನ್‌ ಹೇಳಿದ್ದಾರೆ. ಜಿಎಸ್‌ಟಿ ಆರಂಭದಲ್ಲಿ ಸಮಸ್ಯೆ ತಂದೊಡ್ಡಿದ್ದರೂ ದೇಶದ ಆರ್ಥಿಕತೆಗೆ ನೆರವಾಗಿದೆ. ಇನ್ನೊಂದೆಡೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಸುಧಾರಣೆ ಕೂಡ ಪ್ರಮುಖವಾದದ್ದು. ಕಳೆದ ವರ್ಷ ಭಾರತದ ಅಭಿವೃದ್ಧಿ ವೇಗ ಶೇ.6.7ರಷ್ಟಿತ್ತು ಮತ್ತು ಈ ವರ್ಷ ನಾವು ಇದನ್ನು ಶೇ.7.4ರಷ್ಟು ನಿರೀಕ್ಷಿಸಿದ್ದೇವೆ. ಇದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

Advertisement

ಇದೇ ವೇಳೆ, ನೀತಿಗಳನ್ನು ಸರಿಯಾಗಿ ನಿರ್ವಹಿಸಿದರೆ ಭಾರತವು ಆರ್ಥಿಕತೆಯ ಕೇಂದ್ರವಾಗಿ ಹೊರಹೊಮ್ಮಬಹುದು ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next