Advertisement

ರೇಪ್‌ಗಳ ರಾಜಧಾನಿ!ದಿಲ್ಲಿಯಲ್ಲಿ ಈ ವರ್ಷ140 ರೇಪ್‌,200 ಕಿರುಕುಳ ಕೇಸ್

10:59 AM Feb 09, 2017 | |

ಹೊಸದಿಲ್ಲಿ: ಈ ಅಂಕಿ ಅಂಶ ನೋಡಿದರೆ ರಾಷ್ಟ್ರ ರಾಜಧಾನಿ ಮಹಿಳೆಯರಿಗೆ ಸುರಕ್ಷಿತವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. 2017 ರ ಜನವರಿ ತಿಂಗಳೊಂದರಲ್ಲೇ ದೆಹಲಿಯಲ್ಲಿ ಬರೊಬ್ಬರಿ 140 ಅತ್ಯಾಚಾರ ಪ್ರಕರಣಗಳು ಮತ್ತು 200 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ದಾಖಲಾದ ಕೇಸ್‌ಗಳ ಪೈಕಿ 43 ರೇಪ್‌ ಪ್ರಕರಣ, 133 ಕಿರುಕಳ ಪ್ರಕರಣಗಳನ್ನು ಇನ್ನೂ ಬಗೆಹರಿಸಲು ಸಾಧ್ಯವಾಗಿಲ್ಲ. 

Advertisement

2016 ರಲ್ಲಿ ದೆಹಲಿಯಲ್ಲಿ 2,155 ರೇಪ್‌ ಕೇಸ್‌ಗಳು ದಾಖಲಾಗಿದ್ದು, ಅವುಗಳ ಪೈಕಿ 291 ಇನ್ನೂ ಬಗೆಹರಿದಿಲ್ಲ. 4,165 ಕಿರುಕುಳ ಪ್ರಕರಣಗಳೂ ದಾಖಲಾಗಿವೆ ಎನ್ನುವ ಅಂಕಿ ಅಂಶಗಳನ್ನು  ರಾಜ್ಯ ಸಭೆಯಲ್ಲಿ  ಪ್ರಶ್ನೋತ್ತರ ಕಲಾಪದ ವೇಳೆ ಗೃಹ ಖಾತೆಯ ರಾಜ್ಯ ಸಚಿವ ಹಂಸ ರಾಜ್‌ ಅಹಿರ್‌ ಅವರು ನೀಡಿದ್ದಾರೆ. 

ಬೆಚ್ಚಿ ಬೀಳುವ ಅಂಶವೆಂದರೆ ಕಳೆದ 3 ವರ್ಷಗಳಲ್ಲಿ ಪೊಲೀಸರ ಮೇಲೆಯೇ 36 ರೇಪ್‌ ಕೇಸ್‌ಗಳು ದಾಖಲಾಗಿವೆ. ಇವುಗಳ ಪೈಕಿ 2 ಕೇಸ್‌ಗಳು ರದ್ದಾಗಿದ್ದು, 6 ಪ್ರಕರಣಗಳಲ್ಲಿ ಪೊಲೀಸರು ನಿರಪರಾಧಿಗಳು ಎಂದು ತೀರ್ಪು ಬಂದಿದೆ. ಉಳಿದ 28 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next