Advertisement

India: ಹೆಚ್ಚುತ್ತಿದೆ ಭಾರತದ ಸಮೃದ್ಧಿ

09:08 PM Aug 18, 2023 | Team Udayavani |

ಭಾರತ ಅಭಿವೃದ್ಧಿ ಹೊಂದುತ್ತಿದೆ. ಇದೇ ದಿಕ್ಕಿನಲ್ಲಿ ನಡೆದು 2047ರ ವೇಳೆಗೆ ಭಾರತ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಎಸ್‌ಬಿಐ ಮತ್ತು ಪತ್ರಕರ್ತರೊಬ್ಬರ ಸಂಶೋಧನಾ ವರದಿಯನ್ನು ಆಧಾರವಾಗಿಟ್ಟುಕೊಂಡು, ದೇಶದಲ್ಲಿ ಈಗ ತೆರಿಗೆ ರಿಟರ್ನ್Õ ಫೈಲ್‌ ಮಾಡುತ್ತಿರುವವರ ಲೆಕ್ಕಾಚಾರದ ಮೇಲೆ ಅಭಿವೃದ್ಧಿಯ ಲೆಕ್ಕಾಚಾರ ಹಾಕಲಾಗಿದೆ. ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್‌ನಲ್ಲಿ ಮೋದಿಯವರೇ ಈ ಕುರಿತು ಬರೆದುಕೊಂಡಿದ್ದಾರೆ.

Advertisement

ಮಧ್ಯಮ ವರ್ಗದ ಆದಾಯ ಹೆಚ್ಚಳ

ಕಳೆದ 9 ವರ್ಷ ಅಂದರೆ, 2014ರಿಂದ 2023ರವರೆಗಿನ ಆದಾಯ ತೆರಿಗೆ ರಿಟರ್ನ್Õ ಸಲ್ಲಿಕೆಯನ್ನು ಆಧಾರವಾಗಿಟ್ಟು ಎಸ್‌ಬಿಐ ವರದಿ ರೂಪಿಸಿದೆ. ಇದರ ಪ್ರಕಾರ, 2014ರ ಆರ್ಥಿಕ ವರ್ಷದಲ್ಲಿ ವ್ಯಕ್ತಿಯೊಬ್ಬ 4.4 ಲಕ್ಷ ರೂ. ಆದಾಯ ತೆರಿಗೆ ರಿಟರ್ನ್Õ ಫೈಲ್‌ ಮಾಡಿದ್ದರೆ, ಪ್ರಸಕ್ತ ವರ್ಷ ಆತ 13 ಲಕ್ಷ ರೂ. ಫೈಲ್‌ ಮಾಡಿದ್ದಾನೆ. ಹೀಗಾಗಿ, ದೇಶದ ಮಧ್ಯಮ ವರ್ಗದವರ ಆದಾಯ ಭರಪೂರ ಹೆಚ್ಚಾಗಿದೆ ಎಂದು ಎಸ್‌ಬಿಐ ಹೇಳಿದೆ. ಇನ್ನು ಪತ್ರಕರ್ತ ಪದ್ಮನಾಭನ್‌ ಅವರು ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದಿದ್ದಾರೆ.

ಪ್ರತಿ ವರ್ಗದಲ್ಲಿಯೂ ಏರಿಕೆ

ಈ ಕೆಳಗಿನ ಆದಾಯದ ವರ್ಗಗಳನ್ನು ನೋಡಿದರೆ, ಕಳೆದ 9 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಆದಾಯ ಹೆಚ್ಚಳವಾಗಿರುವುದನ್ನು ಗಮನಿಸಬಹುದು. ಅಂದರೆ, ಸುಮಾರು 4 ಪಟ್ಟು ಹೆಚ್ಚಾಗಿದೆ.

Advertisement

ವ್ಯಕ್ತಿಗತ ಆದಾಯ ತೆರಿಗೆ ಸಲ್ಲಿಕೆ

5ರಿಂದ 10 ಲಕ್ಷ ರೂ. ಆದಾಯ

2013-14 – 37,02,295

2022-23 – 1,10,91,674

10ರಿಂದ 20 ಲಕ್ಷ ರೂ. ಆದಾಯ

2013-14 – 12,04,137

2022-23 – 45,54,670

20ರಿಂದ 50 ಲಕ್ಷ ರೂ. ಆದಾಯ

2013-14 – 4,10,079

2022-23 – 19,20,276

50 ಲಕ್ಷದಿಂದ 1 ಕೋಟಿ ರೂ. ಆದಾಯ

2013-14 – 80,454

2022-23 – 3,32,065

1 ಕೋಟಿ ರೂ.ಗಿಂತ ಹೆಚ್ಚು ಆದಾಯ

2013-14 – 46,384

2022-23 – 1,69,890

ತೆರಿಗೆ ಪಾವತಿಸುವವರ ಸಂಖ್ಯೆಯೂ ಹೆಚ್ಚು

2014ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಈಗ ಎಲ್ಲ ರಾಜ್ಯಗಳಲ್ಲೂ ತೆರಿಗೆ ಪಾವತಿದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.  ಅದರಲ್ಲೂ ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಹಲವಾರು ಪಟ್ಟು ಹೆಚ್ಚಳವಾಗಿದೆ. ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಳವಾಗಿದೆ ಎಂದರೆ, ಕೇವಲ ಅಭಿವೃದ್ದಿಯಷ್ಟೇ ಅಲ್ಲ, ಅವರ ಜೀವನ ಮಟ್ಟವೂ ಸುಧಾರಣೆಯಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರ

2014 – 5,15,838

2023 – 18,52,754

ಗುಜರಾತ್‌

2014 – 3,60,148

2023 – 14,02,636

ಉತ್ತರ ಪ್ರದೇಶ

2014 – 1,65,903

2023 – 11,92,012

ಕರ್ನಾಟಕ

2014 – 2,10,997

2023 – 7,41,902

ಉತ್ತರ ಪ್ರದೇಶ ಉತ್ತಮ

ಮೋದಿಯವರೇ ಬರೆದುಕೊಂಡಿರುವಂತೆ, ಉತ್ತರ ಪ್ರದೇಶದಲ್ಲಿ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ. 2014ರಲ್ಲಿ ಕೇವಲ 1.65 ಲಕ್ಷ ಮಂದಿ ತೆರಿಗೆ ಕಟ್ಟುತ್ತಿದ್ದರೆ, ಈಗ 11.92 ಲಕ್ಷ ಮಂದಿ ಪಾವತಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌ನಲ್ಲೂ ತೆರಿಗೆ ಪಾವತಿದಾರರು ಹೆಚ್ಚಾಗಿದ್ದಾರೆ. ಇದೇ ಹಾದಿಯಲ್ಲಿ ಮುನ್ನಡೆದರೆ, 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬ ಕನಸನ್ನು ನನಸು ಮಾಡಬಹುದು ಎಂದು ಮೋದಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next