ನವದೆಹಲಿ: ಭಾರತದಲ್ಲಿ ವಿದ್ಯುತ್ ಬಳಕೆಯ ಪ್ರಮಾಣ ಶೇ.9ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಜೂನ್ ತಿಂಗಳಿನಲ್ಲಿ 152.38 ಬಿಲಿಯನ್ ಯೂನಿಟ್ಸ್ (BU)ಗಳು ಬಳಕೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:INDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ
ಅಧಿಕೃತ ಅಂಕಿಅಂಶದ ಪ್ರಕಾರ, 2023ರ ಜೂನ್ ತಿಂಗಳಿನಲ್ಲಿ 140.70 ಬಿಲಿಯನ್ ಯೂನಿಟ್ಸ್ ಗಳಷ್ಟು ಬಳೆಕೆಯಾಗಿತ್ತು. 2023ರ ಜೂನ್ ನಲ್ಲಿ 223.29 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಅನ್ನು ಸರಬರಾಜು ಮಾಡಿದ್ದು, 2024ರ ಜೂನ್ ನಲ್ಲಿ 245.41 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಗರಿಷ್ಠ ವಿದ್ಯುತ್ ಬೇಡಿಕೆ ಯೋಜನೆ:
ಈ ಮೊದಲು ಇಂಧನ ಸಚಿವಾಲಯ 235 ಗಿಗಾ ವ್ಯಾಟ್ ವಿದ್ಯುತ್ ಅನ್ನು ಬೆಳಗ್ಗಿನ ಸಮಯ ಸರಬರಾಜು ಮಾಡುವಂತೆ ತಿಳಿಸಿತ್ತು. ಅದೇ ರೀತಿ ಸಂಜೆಯೂ 225 ಗಿಗಾ ವ್ಯಾಟ್ ವಿದ್ಯುತ್ ಸರಬರಜು ಮಾಡುವಂತೆ ತಿಳಿಸಿತ್ತು.