Advertisement
ಭಾರತದ ಎಲ್ಲ ದೃಷ್ಟಿಯಿಂದಲೂ ಹೇಳುವುದಾದರೆ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಶುರುವಾಗಿರುವುದು ಉತ್ತಮ ಸಂಗತಿ. ಈಗಾಗಲೇ ಚೀನ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿದೆ. ಆದರೆ ಭಾರತ ಮಾತ್ರ ಅಂಥ ಯಾವುದೇ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳದೇ ಕೇವಲ ಸರಕಾರಿ ಯೋಜನೆಗಳ ಮೂಲಕವೇ ನಿಯಂತ್ರಣ ಸಾಧಿಸಿದೆ.
Related Articles
Advertisement
ಇದೇ ಸಮೀಕ್ಷೆ ಮತ್ತೂಂದು ಗಮನಾರ್ಹ ಅಂಶವೊಂದನ್ನು ಬಹಿರಂಗ ಮಾಡಿದೆ. ಭಾರತದಲ್ಲೀಗ ಪ್ರತೀ 1,000 ಪುರುಷರಿಗೆ 1,020 ಮಹಿಳೆಯರಿದ್ದಾರೆ. ಅದೇ 2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರತೀ 1,000 ಪುರುಷರಿಗೆ 991 ಮಹಿಳೆಯರು ಇದ್ದರು. ಅಂದರೆ ಭಾರತದಲ್ಲಿ ಲಿಂಗಾನುಪಾತದಲ್ಲಿ ಬಹಳಷ್ಟು ಸುಧಾರಣೆಯಾಗಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಕರ್ನಾಟಕದಲ್ಲಿ ಕಳೆದ ಸಮೀಕ್ಷೆಯಲ್ಲಿ ಒಟ್ಟಾರೆ ಜನನ ದರ 1.8 ಇತ್ತು. ಈ ಸಮೀಕ್ಷೆಯಲ್ಲಿ ಇದು 1.7ಕ್ಕೆ ಕುಸಿತ ಕಂಡಿದೆ. ಆದರೆ ಲಿಂಗಾನುಪಾತದಲ್ಲಿ ಕರ್ನಾಟಕ ಕೊಂಚ ಹಿಂದೆ ಉಳಿದಿರುವುದನ್ನು ಕಾಣಬಹುದು. ಇಲ್ಲಿ ಪ್ರತೀ 1000 ಪುರುಷರಿಗೆ 979 ಮಹಿಳೆಯರು ಇದ್ದಾರೆ.
ಇಷ್ಟೆಲ್ಲ ಆದರೂ ಭಾರತ 2031ರ ವೇಳೆಗೆ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ದೇಶವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ಮೂಲಕ ಚೀನವನ್ನು ಹಿಂದೆ ಹಾಕಲಿದೆ. ಇಲ್ಲೂ ಒಂದು ಸಮಾಧಾನಕರ ಸಂಗತಿ ಇದೆ. ವಿಶ್ವಸಂಸ್ಥೆಯು ಅಂದಾಜು ಹಾಕಿದ್ದ ಪ್ರಕಾರ, ಭಾರತ 2022ರಲ್ಲೇ ಚೀನವನ್ನು ಹಿಂದೆ ಹಾಕಬೇಕಿತ್ತು. ಆದರೆ ಒಂದು ದಶಕದ ಅನಂತರ ಭಾರತದ ಜನಸಂಖ್ಯೆ ಚೀನ ಮೀರಿಸಲಿದೆ. ಅಲ್ಲದೆ 2040ರಿಂದ 2050ರ ವೇಳೆಗೆ ಭಾರತದ ಜನಸಂಖ್ಯೆ 1.6ರಿಂದ 1.8 ಬಿಲಿಯನ್ ಆಗಲಿದೆ ಎಂದೇ ಅಂದಾಜಿಸಲಾಗಿದೆ.