Advertisement

ದೃಢ ನಾಯಕ ಬೇಕು,ದುರಂತ ನಾಯಕನಲ್ಲ; ಜೇಟ್ಲಿ  ವ್ಯಂಗ್ಯ

06:00 AM Jul 17, 2018 | Team Udayavani |

ಹೊಸದಿಲ್ಲಿ: “ದೇಶಕ್ಕೆ ಕಣ್ಣೀರಿಡುವ ಕುಮಾರಸ್ವಾಮಿಯಂಥ ನಾಯಕರು ಬೇಕಿಲ್ಲ, ನರೇಂದ್ರ ಮೋದಿಯಂಥ ದೃಢ ನಾಯಕ ಬೇಕು…’ ಇದು ಕರ್ನಾಟಕ ಮುಖ್ಯಮಂತ್ರಿ ಕುಮಾರ ಸ್ವಾಮಿ “ಅಳು’ ಕುರಿತಂತೆ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಾಡಿರುವ ವ್ಯಂಗ್ಯ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಈ ದೇಶವನ್ನು ತಮ್ಮ ಕುಟುಂಬವಷ್ಟೇ ಆಳಬೇಕು ಎಂದುಕೊಂಡಿರುವ ಕಾಂಗ್ರೆಸ್‌ ಯಾರಿಗೂ ನೆಮ್ಮದಿ ಯಿಂದ ಇರಲು ಬಿಡುತ್ತಿಲ್ಲ ಎಂದಿದ್ದಾರೆ. ಈ ಹಿಂದೆ ಚೌಧರಿ ಚರಣ್‌ ಸಿಂಗ್‌, ಚಂದ್ರಶೇಖರ್‌, ಎಚ್‌.ಡಿ.ದೇವೇಗೌಡ ಹಾಗೂ ಐ.ಕೆ. ಗುಜ್ರಾಲ್‌ ಅವರ ಮೈತ್ರಿ ಸರಕಾರಗಳಿಗೆ ನೀಡುತ್ತಿದ್ದ ಕಿರುಕುಳವನ್ನೇ ಈಗಲೂ ಕಾಂಗ್ರೆಸ್‌ ಕುಮಾರಸ್ವಾಮಿಗೆ ಕೊಡುತ್ತಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ. ಇದಷ್ಟೇ ಅಲ್ಲ, ಕುಮಾರಸ್ವಾಮಿ ಅಳುವನ್ನು ಹಿಂದಿ ಸಿನೆಮಾದ ದುಃಖಾಂತ್ಯದ ಯುಗಕ್ಕೂ ಹೋಲಿಕೆ ಮಾಡಿದ್ದಾರೆ.

Advertisement

ವಿರೋಧ ಪಕ್ಷಗಳು ಫೆಡಲರ್‌ ಫ್ರಂಟ್‌ ರಚನೆ ಪ್ರಯತ್ನದಲ್ಲಿವೆ. ಇದೊಂದು ವಿಫ‌ಲ ಐಡಿಯಾ ಎಂದೂ ಜೇಟ್ಲಿ ಬರೆದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next