Advertisement

ಇದು ಭಾರತದ ಏಕೈಕ ಜೀವಂತ ಜ್ವಾಲಾಮುಖಿ! ಎಲ್ಲಿದೆ ಗೊತ್ತಾ…

05:19 PM Feb 18, 2017 | Sharanya Alva |

ಪಣಜಿ: ಜ್ವಾಲಾಮುಖಿ ಸ್ಫೋಟ, ಜ್ವಾಲಾಮುಖಿ ಹೀಗೆ ವಿದೇಶದಲ್ಲಿ ಸಂಭವಿಸುವ ಘಟನೆಗಳ ಬಗ್ಗೆಯೇ ಹೆಚ್ಚು ವರದಿಯಾಗೋದನ್ನು ಓದಿರುತ್ತೀರಿ. ಆದರೆ ಭಾರತದಲ್ಲಿಯೂ ಜ್ವಾಲಾಮುಖಿ ಹೊಂದಿರುವ ಪ್ರದೇಶವೊಂದಿದೆ! ನೂರಾರು ವರ್ಷಗಳಿಂದ ಸ್ತಬ್ಧವಾಗಿದ್ದ ಈ ಜ್ವಾಲಾಮುಖಿ ಇದೀಗ ಜನವರಿ ತಿಂಗಳಲ್ಲಿ 4 ಗಂಟೆಗಳ ಕಾಲ ಹೊಗೆಯುಗುಳಿರುವ ವಿಷಯ ಬೆಳಕಿಗೆ ಬಂದಿದೆ.

Advertisement

ಹೌದು ಭಾರತದ ಏಕೈಕ ಜೀವಂತ ಜ್ವಾಲಾಮುಖಿ ಎಂದೇ ಹೆಸರಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಪ್ರದೇಶ ಸಮೀಪದ ಬರ್ರೆನ್ ದ್ವೀಪ ಪ್ರದೇಶದಲ್ಲಿ ಈ ಜ್ವಾಲಾಮುಖಿ ಇದೆ ಎಂದು ಗೋವಾ ಮೂಲದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಓಸಿಯನೋಗ್ರಫಿ(ಎನ್ಐಓ) ವಿಜ್ಞಾನಿಗಳು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಎನ್ಐಓ ಸಂಶೋಧನಾ ತಂಡದ ಪ್ರಕಾರ, ಜನವರಿ 23ರಂದು ಜ್ವಾಲಾಮುಖಿ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದ ಕೆಂಪು ದ್ರವವನ್ನು ಹೊರ ಸೂಸಿದೆ. ಹಾಗಾಗಿ ಮತ್ತೆ ಜ್ವಾಲಾಮುಖಿ ಸ್ಫೋಟಗೊಳ್ಳಬಹುದೇ ಎಂಬ ಆತಂಕ ಸಂಶೋಧಕರದ್ದು. ಈಗಾಗಲೇ ಜ್ವಾಲಾಮುಖಿಯ ಬೂದಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಂಗ್ರಹಿಸಿದ್ದು, ಅದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಿವರಿಸಿದೆ.

ಸುಮಾರು 150 ವರ್ಷಗಳ ಹಿಂದೆ ಇಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂಬುದು ಸಂಶೋಧಕರ ಅಭಿಪ್ರಾಯ. ಆದರೆ ಈ ಸಂಶೋಧಕರ ತಂಡ ದ್ವೀಪ ಪ್ರದೇಶದೊಳಕ್ಕೆ ಹೋಗಿಲ್ಲ ಎಂದು ಪ್ರಕಟಣೆ ಹೇಳಿದೆ. ಯಾಕೆಂದರೆ ಇದು ಅತೀ ಅಪಾಯಕಾರಿ ಪ್ರದೇಶವಾಗಿದೆಯಂತೆ. ಬರ್ರೆನ್ ದ್ವೀಪಪ್ರದೇಶ  ಅಂಡಮಾನ್ ಈಶಾನ್ಯ ದಿಕ್ಕಿನಿಂದ ಸುಮಾರು 140 ಕಿಲೋ ಮೀಟರ್ ದೂರದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next