Advertisement

ವಿಶ್ವಸಂಸ್ಥೆ ವರದಿಗೆ ಭಾರತದ ಆಕ್ಷೇಪ

11:35 AM Jul 11, 2018 | Team Udayavani |

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರ, ಛತ್ತೀಸ್‌ಗಡ, ಜಾರ್ಖಂಡ್‌ಗಳಲ್ಲಿ ಸೇನಾ ಪಡೆಗಳ ಜತೆಗಿನ ಸಂಘರ್ಷದಲ್ಲಿ ಮಕ್ಕಳು ಹೆಚ್ಚಿನ ರೀತಿಯಲ್ಲಿ ತೊಂದರೆಗೀಡಾಗಿದ್ದಾರೆ ಎಂಬ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರಸ್‌ ವರದಿಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ಅದು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಯಾವುದೇ ರೀತಿಯಲ್ಲಿ ಅಪಾಯಕಾರಿಯೂ ಅಲ್ಲ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಉಪ ರಾಯಭಾರಿ ತನ್ಮಯ ಲಾಲ್‌ ಹೇಳಿದ್ದಾರೆ. 

Advertisement

ಜಾರ್ಖಂಡ್‌, ಛತ್ತೀಸ್‌ಗಡದಲ್ಲಿ ನಕ್ಸಲೀಯರು ಮಕ್ಕಳನ್ನು ನೇಮಿಸಿಕೊಂಡು ಅವರ ಮೂಲಕ ಹಿಂಸಾಕೃತ್ಯಗಳಿಗೆ ಪ್ರೇರಣೆ ನಡೆಸಲಾಗುತ್ತದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಲಾಗಿದೆ. ಈ ವರದಿಯನ್ನು ಯಾವುದೇ ಹಂತದಲ್ಲಿಯೂ ಗಣನೆಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಲಾಲ್‌ ಹೇಳಿದ್ದಾರೆ. ಸೋಮವಾರ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, “ಪ್ರಧಾನ ಕಾರ್ಯದರ್ಶಿಗಳ ವರದಿ ಪೂರ್ವಗ್ರಹ ಪೀಡಿತ’ ಎಂದಿದ್ದಾರೆ. ವರದಿ ಸಿದ್ಧಪಡಿಸಿದವರು ತಮ್ಮ ವಾದವನ್ನು ಪ್ರಬಲವಾಗಿ ಸಮರ್ಥಿಸುವಂಥ ಅಂಶಗಳನ್ನು ನೀಡಿಲ್ಲ ಎಂದಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ಶಾಶ್ವತ ರಾಯಭಾರಿ ಮಲೀಹಾ ಲೋಧಿ ಜೂ.14ರ ತಥಾಕಥಿತ ಮಾನವ ಹಕ್ಕುಗಳ ಉಲ್ಲಂಘನೆ ಅಂಶವನ್ನು ಪ್ರಸ್ತಾಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next