Advertisement

ಹಮಾಸ್‌ ನಿಲುವಳಿಯಲ್ಲಿ ಭಾರತ ತಟಸ್ಥ ನಿಲುವು

06:00 AM Dec 08, 2018 | |

ನ್ಯೂಯಾರ್ಕ್‌: ಗಾಜಾ ಪಟ್ಟಿಯಲ್ಲಿನ ಹಮಾಸ್‌ ಹಾಗೂ ಇತರ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಯನ್ನು ವಿರೋಧಿಸಿ ವಿಶ್ವಸಂಸ್ಥೆ ಕರಡು ನಿಲುವಳಿಗೆ ಮತದಾನ ಮಾಡುವಲ್ಲಿ ಭಾರತ ತಟಸ್ಥ ನಿಲುವು ತಳೆದಿದೆ. ನಿಲುವಳಿ ಪರವಾಗಿ 87 ಮತಗಳು ಚಲಾವಣೆಯಾಗಿದ್ದು, ವಿರುದ್ಧವಾಗಿ 58 ಮತ ಚಲಾವಣೆಯಾಗಿದೆ. 32 ಸದಸ್ಯರು ತಟಸ್ಥ ನಿಲುವು ತಳೆದು, ಮತದಾನದಿಂದ ದೂರವುಳಿದಿದ್ದಾರೆ. ಅಮೆರಿಕದ ಬೆಂಬಲದ ಮೂಲಕವೇ ಈ ನಿಲುವಳಿಯನ್ನು ಮತಕ್ಕೆ ಹಾಕಲಾಗಿತ್ತು. ಅದರೆ ಮೂರನೇ ಒಂದರಷ್ಟು ಬಹುಮತ ಪಡೆಯಲು ವಿಫ‌ಲವಾಯಿತು. ನಿಲುವಳಿ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ಕಾಯಂ ಪ್ರತಿನಿಧಿ ನಿಕ್ಕಿ ಹ್ಯಾಲೆ, ಈ ಹಿಂದೆ ಇಸ್ರೇಲ್‌ ವಿರೋಧಿಸಿ 500ಕ್ಕೂ ಹೆಚ್ಚು ಪ್ರಧಾನ ಅಧಿವೇಶನದಲ್ಲಿ ನಿಲುವಳಿ ಮಂಡಿಸಲಾಗಿದೆ. ಆದರೆ ಈವರೆಗೂ ಹಮಾಸ್‌ ಕೃತ್ಯವನ್ನು ಖಂಡಿಸಿ ನಿಲುವಳಿ ಮಂಡಿಸಿಲ್ಲ ಎಂದಿದ್ದಾರೆ.

Advertisement

ಭಾರತ ಟೀಕೆ: ಏತನ್ಮಧ್ಯೆ, ಆಫ್ಘಾನ್‌ನಲ್ಲಿ ನಿರಂತರ ದಾಳಿ ನಡೆ ಸುತ್ತಿರುವ ಹೊಸ ತಾಲಿಬಾನ್‌ ಉಗ್ರರಿಗೆ ನಿರ್ಬಂಧ ಹೇರುವ ನಿರ್ಣಯ ಕೈಗೊಳ್ಳುವಲ್ಲಿ ವಿಶ್ವಸಂಸ್ಥೆ ವಿಫ‌ಲವಾಗಿದೆ ಎಂದು ಭಾರತ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next