ಅಹಮದಾಬಾದ್ : ” ಭಾರತ ಪ್ರಜಾಪ್ರಭುತ್ವದ ತಾಯಿಯಾಗಲು ಹೆಮ್ಮೆಪಡುತ್ತದೆ, ಏಕೆಂದರೆ ಅದರ ಮೌಲ್ಯಗಳು ನಮ್ಮ ಸಾಮಾಜಿಕ ಜೀವನದಲ್ಲಿ ಮೂಡಿಬಂದಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಯ 95 ನೇ ವಾರ್ಷಿಕ ಸಭೆ ಮತ್ತು ಉಪಕುಲಪತಿಗಳ ರಾಷ್ಟ್ರೀಯ ಸೆಮಿನಾರ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ಗಮನಿಸಿ ಜಾಗತಿಕವಾಗಿ ಮುನ್ನಡೆ ಕಾಣಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ ಇ ಪಿ) ಅನಾವರಣಗೊಳಿಸಿದೆ. ಭಾರತವು ‘ಆತ್ಮನಿರ್ಭರ’ ಹಾದಿಯಲ್ಲಿ ಸಾಗುತ್ತಿರುವಾಗ ಯುವಕರ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ ಎಂದಿದ್ದಾರೆ.
ಓದಿ : ಚಂದನವನದ ನವದಂಪತಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್’ಗೆ ಕೋವಿಡ್ ಸೋಂಕು ದೃಢ
ಈ ಸಂದರ್ಭದಲ್ಲಿ ಅಂಬೇಡ್ಕರ್ ದಿನಾಚರಣೆಯ ಅಂಗವಾಗಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನನು ನೆನಪಿಸಿಕೊಂಡ ಪ್ರಧಾನಿ, ಸ್ವಾತಂತ್ರ್ಯ ನಂತರ ಪ್ರಜಾ ಪ್ರಭುತ್ವದ ಎಲ್ಲಾ ಮೌಲ್ಯಗಳನ್ನು ಮುಂದೆ ತೆಗೆದುಕೊಂಡು ಹೋಗಲು ಭದ್ರವಾದ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಓಪನ್ ಯೂನಿವರ್ಸಿಟಿ ಈ ಕಾರ್ಯಕ್ರಮವನ್ನು ಆಯೋಜಿಸಿತು. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’, ಗುಜರಾತ್ ನ ರಾಜ್ಯಪಾಲ ಆಚಾರ್ಯ ದೇವರಾತ್ ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಸಭೆಯಲ್ಲಿ ಭಾಗವಹಿಸಿದ್ದರು.
ಓದಿ : ಮಾಸ್-ಕ್ಲಾಸ್‌ಗೆ ಒಪ್ಪುವ ಹೂರಣ: ಪ್ರಜ್ವಲ್ ದೇವರಾಜ್ ರ ‘ಅರ್ಜುನ್ ಗೌಡ’ ಟ್ರೇಲರ್