Advertisement

ಲಾಂಗ್‌ ಜಂಪರ್‌ ಶ್ರೀಶಂಕರ್‌ಗೆ ಚಿನ್ನ 

10:40 PM May 26, 2022 | Team Udayavani |

ಹೊಸದಿಲ್ಲಿ: ಗ್ರೀಸ್‌ನಲ್ಲಿ ನಡೆಯುತ್ತಿರುವ 12ನೇ “ಇಂಟರ್‌ನ್ಯಾಶನಲ್‌ ಜಂಪಿಂಗ್‌ ಮೀಟಿಂಗ್‌’ನಲ್ಲಿ ಭಾರತದ ಸ್ಟಾರ್‌ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌ ಚಿನ್ನದ ಪದಕ ಜಯಿಸಿದ್ದಾರೆ. ಅವರು 8.31 ಮೀ. ದೂರದ ಸಾಧನೆಯೊಂದಿಗೆ ಮೊದಲಿಗರಾದರು.

Advertisement

10 ಮಂದಿಯ ಈ ಸ್ಪರ್ಧೆಯಲ್ಲಿ ಕೇವಲ ಮೂವರಷ್ಟೇ 8 ಮೀ. ದೂರದ ಸಾಧನೆಯೊಂದಿಗೆ ಗುರುತಿಸಲ್ಪಟ್ಟರು. ಮೊದಲೆರಡು ಹಂತಗಳಲ್ಲಿ ಅವರು ಕ್ರಮವಾಗಿ 7.88 ಮೀ. ಹಾಗೂ 7.71 ಮೀ. ದೂರ ನೆಗೆದಿದ್ದರು. ಸ್ವೀಡನ್‌ನ ತೋಬಿಯಾಸ್‌ ಮಾಂಟ್ಲೆರ್‌ ಬೆಳ್ಳಿ (8.27 ಮೀ.) ಮತ್ತು ಫ್ರಾನ್ಸ್‌ನ ಜುಲೆಸ್‌ ಪೋಮ್ಮರಿ ಕಂಚು (8.17 ಮೀ.) ಗೆದ್ದರು.

ಟೋಕಿಯೊ ಒಲಿಂಪಿಕ್ಸ್‌ ಬಳಿಕ ಶ್ರೀಶಂಕರ್‌ ಪ್ರತಿನಿಧಿಸಿದ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆ ಇದಾಗಿದೆ. ಟೋಕಿಯೋದಲ್ಲಿ ಅವರು 7.69 ಮೀ. ದೂರ ನೆಗೆದಿದ್ದರು. ಶ್ರೀಶಂಕರ್‌ ಒಂದು ತಿಂಗಳ ಹಿಂದಷ್ಟೇ 8.36 ಮೀ. ದೂರದ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next