Advertisement
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪಾಕಿಸ್ಥಾನ ಪ್ರಧಾನಿ ಶಹಭಾಜ್ ಷರೀಫ್, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಹಲವು ದೇಶಗಳ ನಾಯಕರು ಭಾಗಿಯಾಗಿದ್ದರು. ಮುಂದಿನ ಬಾರಿ ಈ ಸಭೆ ಭಾರತದಲ್ಲಿ ನಡೆಯಲಿದ್ದು, ಭಾರತವೇ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ.
ಸಮರಖಂಡ್‌ನ ಸಭೆಯಲ್ಲಿ ಏಷ್ಯಾದ ಪ್ರಮುಖ ದೇಶಗಳು ಭಾಗಿಯಾಗಿರುವುದಲ್ಲದೇ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿರುವ ಹೊತ್ತಿ ನಲ್ಲೇ ನಡೆಯು ತ್ತಿದೆ. ರಷ್ಯಾ ವಿರುದ್ಧ ಅಮೆರಿಕ, ಯುಕೆ ಮೊದಲ್ಗೊಂಡು ಪಾಶ್ಚಿಮಾತ್ಯ ದೇಶಗಳು ದಿಗ್ಬಂಧನ ಹೇರಿದ್ದು, ಆರ್ಥಿಕ ವಹಿವಾಟಿಗೂ ಕಡಿವಾಣ ಹಾಕಿವೆ. ಅಲ್ಲದೆ, ರಷ್ಯಾ ಕ್ರಮ ಖಂಡಿಸದ ಚೀನ ವಿರುದ್ಧವೂ ಪಾಶ್ಚಿಮಾತ್ಯ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಭಾರತದ ವಿಷಯದಲ್ಲಿ ಮಾತ್ರ ಕೊಂಚ ಮೃದು ಧೋರಣೆ ಅನುಸರಿಸಿವೆ. ಹೀಗಾಗಿ ಯುದ್ಧ ಶುರುವಾದ ಮೇಲೆ ಪ್ರಮುಖ ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ರಷ್ಯಾ ಭಾಗಿ ಯಾಗುತ್ತಿರುವುದು ಇದೇ ಮೊದಲು. ಪುತಿನ್ ಜತೆಗೆ, ಚೀನ, ಭಾರತ ಸೇರಿದಂತೆ ಹಲವು ದೇಶಗಳು ಮಾತು ಕತೆ ನಡೆಸಿರುವುದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೂ ಕಾರಣವಾಗುವ ಸಂಭವವಿದೆ.
Related Articles
Advertisement
ಪುತಿನ್ ಜತೆಗಿನ ಮಾತುಕತೆ ವೇಳೆ, ಆಹಾರ, ತೈಲ ಮತ್ತು ರಸಗೊಬ್ಬರದ ಪೂರೈಕೆ ಬಗ್ಗೆ ಚರ್ಚಿಸಿದರು. ಸದ್ಯ ಈ ಕುರಿತಂತೆ ಕೆಲವು ಸಮಸ್ಯೆಗಳು ಉಂಟಾಗಿವೆ. ಇವುಗಳನ್ನು ಬಗೆಹರಿಸಬೇಕಿದೆ ಎಂದು ಪುತಿನ್‌ಗೆ ಮೋದಿ ಅವರು ಮನವರಿಕೆ ಮಾಡಿಕೊಟ್ಟರು.
ಶೇ.7.5ರಷ್ಟು ಪ್ರಗತಿ ಸಾಧ್ಯತೆಕೊರೊನಾ ಅಡ್ಡಿಯ ಮಧ್ಯೆಯೂ ಭಾರತದ ಆರ್ಥಿಕತೆಯನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಶೇ.7.5ರಷ್ಟು ಪ್ರಗತಿ ಕಾಣಲಿದೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಮಧ್ಯೆ ಯಾವುದೇ ಅಡೆತಡೆ ಇಲ್ಲದಂತೆ ಸರಕು ಸಾಗಣೆಗೆ ವ್ಯವಸ್ಥೆಯಾಗಬೇಕು ಎಂದು ಒತ್ತಿ ಹೇಳಿದರು. ಇದರಿಂದ ಆರ್ಥಿಕತೆಯೂ ಬೆಳವಣಿಗೆಯಾಗುತ್ತದೆ ಎಂದರು. ಮುಖಾಮುಖಿಯಾದರೂ ಮಾತಿಲ್ಲ
ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಗ್ರೂಪ್ ಫೋಟೋ ತೆಗೆಸಿ ಕೊಳ್ಳುವಾಗ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಒಟ್ಟಿಗೇ ನಿಂತಿದ್ದರು. ಆದರೆ ಕೈಕುಲುಕುವು ದಾಗಲಿ, ಶುಭಾಶಯವಾಗಲೀ ಕಡೇ ಪಕ್ಷ ನಗುವನ್ನೂ ವಿನಿಮಯ ಮಾಡಿಕೊಳ್ಳಲಿಲ್ಲ. ಇವರಿಬ್ಬರೂ ಪರಸ್ಪರ ಭೇಟಿಯಾಗಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಈ ಮಧ್ಯೆ, ಪಾಕಿಸ್ಥಾನ ಪ್ರಧಾನಿ ಶಹಭಾಜ್ ಷರೀಫ್ ಅವರ ಜತೆಗೂ ನರೇಂದ್ರ ಮೋದಿಯವರು ಯಾವುದೇ ಮಾತುಕತೆ ನಡೆಸಲಿಲ್ಲ. ಎಸ್‌ಇಒಗೆ ಭಾರತವೇ ಅಧ್ಯಕ್ಷ
ಸದ್ಯ ಶಾಂಘೈ ಸಹಕಾರ ಒಕ್ಕೂಟದ ಅಧ್ಯಕ್ಷ ಸ್ಥಾನ ಉಜ್ಬೇಕಿಸ್ಥಾನದ ಬಳಿ ಇತ್ತು. ಈ ಸಭೆ ಮುಗಿದ ಬಳಿಕ ಅಧ್ಯಕ್ಷ ಸ್ಥಾನ ಭಾರತದ ಮುಡಿಗೆ ಬಂದಿದೆ. ಹೀಗಾಗಿ 2023ರ ಸಭೆ ಭಾರತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ಶುಭ ಕೋರಿದ್ದು, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಆದರೆ ಈ ಶೃಂಗ ಸಭೆಯಲ್ಲಿ ಭಾಗಿಯಾಗ ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪಾಕಿಸ್ಥಾನ ಹೇಳಿದೆ.