ನವ ದೆಹಲಿ : ಕಳೆದ ಜುಲೈ ತಿಂಗಳುಗಳಿಗಿಂತ ಆಗಸ್ಟ್ ತಿಂಗಳಲ್ಲಿ ತಯಾರಿಕಾ ವಲಯದ ಚಟುವಟಿಕೆಗಳು ಕುಸಿತಗೊಂಡಿವೆ. ಶೇಕಡಾ 55.3 ರಷ್ಟು ಜುಲೈ ತಿಂಗಳಲ್ಲಿ ಐಎಚ್ ಎಸ್ ಮರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ), ಆಗಸ್ಟ್ ತಿಂಗಳಲ್ಲಿ ಶೇಕಡಾ 52.4 ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ : ಮೋದಿ ಸರ್ಕಾರ ಬಂಡವಾಳಶಾಯಿಗಳ ಕೈಗೊಂಬೆ : ಸಿದ್ದರಾಮಯ್ಯ|UDAYAVANI NEWS BULLETIN|2/9/2021
ಆದರೇ, ತಯಾರಿಕಾ ವಲಯದಲ್ಲಿನ ಬೆಳವಣಿಗೆ ಶೇಕಡಾ 50ಕ್ಕಿಂತ ಹೆಚ್ಚಿರುವುದು ಚಟುವಟಿಕೆಗಳು ಬೆಳವಣಿಗೆ ಕಂಡಿರುವುದನ್ನು ಸೂಚಿಸುತ್ತದೆ ಎಂದು ಸೂಚ್ಯಂಕ ಹೇಳುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಐಎಚ್‌ಎಸ್ ಮರ್ಕಿಟ್ ಸಂಸ್ಥೆಯ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ, ಕಳೆದ ತಿಂಗಳು ಅಂದರೇ, ಆಗಸ್ಟ್ ತಿಂಗಳಲ್ಲಿ ದೇಶದ ತಯಾರಿಕಾ ವಲಯದ ಚೇತರಿಕೆಯ ಪ್ರಮಾಣ ಮುಂದುವರಿದಿದ್ದು, ಆದರೇ, ಚೇತರಿಕೆಯ ತ್ವರಿತಕ್ಕೆ ತಡೆ ಬಿದ್ದಂತಾಗಿದೆ. ಬೇಡಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗಣಿಗಾರಿಕೆಯಿಂದ ನಂದಿಗಿರಿಧಾಮಕ್ಕೆ ಧಕ್ಕೆ: ಪರಿಸರ ಪ್ರೇಮಿಗಳ ಆತಂಕ