Advertisement

ಭಾರತದ ಹೊಸ ಹೆಮ್ಮೆ ಬೊಗಿ ಬೀಲ್‌ ಸೇತುವೆ

09:39 AM May 11, 2018 | Karthik A |

ಗಂಡು ನದಿ ಬ್ರಹ್ಮಪುತ್ರಾದಿಂದ ಬೇರ್ಪಟ್ಟಿರುವ ಅಸ್ಸಾಂನ ದಿಬ್ರುಗಢ ಹಾಗೂ ಅರುಣಾಚಲ ಪ್ರದೇಶದ ಪಾಸೀಘಾಟ್‌ ಪ್ರಾಂತ್ಯವನ್ನು ಬೆಸೆಯಲು ನಿರ್ಮಿಸಲಾಗಿರುವ ‘ಬೊಗಿ ಬೀಲ್‌ ಸೇತುವೆ’ ಕೆಲವೇ ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಳ್ಳಲಿದೆ. ಏಷ್ಯಾದಲ್ಲೇ 2ನೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆ ಹೊಂದಿರುವ ಇದರ ವೈಶಿಷ್ಟ್ಯದ ಮಾಹಿತಿ ಇಲ್ಲಿದೆ.

Advertisement

ಉದ್ದೇಶ
ಅಸ್ಸಾಂನ ದಿಬ್ರುಗಢದಿಂದ ಅರುಣಾಚಲದ ಪಾಸೀ ಘಾಟ್‌ ಪ್ರಾಂತ್ಯವನ್ನು ಬ್ರಹ್ಮಪುತ್ರಾ ನದಿ ಬೇರ್ಪಡಿಸುತ್ತದೆ. ದಿಬ್ರುಗಢದಿಂದ ಪಾಸೀಘಾಟ್‌ಗೆ ಅಥವಾ ಪಾಸೀಘಾಟ್‌ ನಿಂದ ದಿಬ್ರುಗಢಕ್ಕೆ ಬರುವುದಾದರೆ ಸುಮಾರು 600 ಕಿ.ಮೀ.ಗಳಷ್ಟು ದೂರವನ್ನು ಸುತ್ತು ಹಾಕಿಕೊಂಡು ಬರಬೇಕಿತ್ತು. ಈ ಅಂತರ ಕಡಿಮೆ ಮಾಡಲು ಬ್ರಹ್ಮಪುತ್ರಾ ನದಿಗೆ ಅಡ್ಡವಾಗಿ ಈ ಸೇತುವೆ ಕಟ್ಟಲಾಗಿದೆ. ಇದರಿಂದ ಈ ಪ್ರಾಂತ್ಯಗಳ ನಡುವಿನ ಅಂತರ 100 ಕಿ.ಮೀ.ಗಳಿಗಿಂತಲೂ ಕಡಿಮೆಯಾಗಲಿದೆ. ಸಾರ್ವಜನಿಕರಿಗಷ್ಟೇ ಅಲ್ಲದೆ, ಸೇನಾ ಪರಿಕರ, ಸಾಮಗ್ರಿಗಳ ತ್ವರಿತ ರವಾನೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಿರುವ ಸೇತುವೆಯಿದು.

4.94 ಕಿ.ಮೀ. ಉದ್ದ
4696 ಕೋಟಿ ನಿರ್ಮಾಣ ವೆಚ್ಚ

1997 : ಯೋಜನೆಗೆ ಅನುಮೋದನೆ ಸಿಕ್ಕಿದ ವರ್ಷ
2002 : ಎನ್‌.ಡಿ.ಎ.-1 ಸರಕಾರದಿಂದ ಕಾಮಗಾರಿ ಶುರು
2007 : ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿದ ಯುಪಿಎ
105 ಅಡಿ : ಬ್ರಹ್ಮಪುತ್ರಾ ನೀರಿನ ಸರಾಸರಿ ಮೇಲ್ಮೈನಿಂದ ಸೇತುವೆಗೆ ಇರುವ ಎತ್ತರ
34.4 : ಅಡಿ ಸೇತುವೆಯಲ್ಲಿ ರೈಲ್ವೆ ಮಾರ್ಗಕ್ಕೂ ರಸ್ತೆ ಮಾರ್ಗ ನಡುವಿನ ಅಂತರ
20,000 : ಸೇತುವೆ ನಿರ್ಮಾಣದಲ್ಲಿ ಬಳಸಲಾಗಿರುವ ಉಕ್ಕಿನ ಪ್ರಮಾಣ

ಸೇತುವೆ ವಿಶೇಷತೆ
– ರಸ್ತೆ – ರೈಲು ಮಾರ್ಗಗಳುಳ್ಳ ಸೇತುವೆ
– ಸೇತುವೆಯ ಮೇಲ್ತುದಿಯಲ್ಲಿ ಮೂರು ಲೇನ್‌ ಗಳ ರಸ್ತೆ ಮಧ್ಯಭಾಗದಲ್ಲಿ ಎರಡು ರೈಲು ಮಾರ್ಗಗಳು
– ಭಾರತದ ಮೊದಲ, ಏಷ್ಯಾದ ಎರಡನೇ ಅತಿ ದೊಡ್ಡ ಸೇತುವೆ
– ಸ್ವೀಡನ್‌, ಡೆನ್ಮಾರ್ಕ್‌ ಸಂಪರ್ಕ ಸೇತುವೆಯಿಂದ ಸ್ಫೂರ್ತಿಗೊಂಡ ಸೇತುವೆ

Advertisement

ಹೆಸರು: ಬೊಗಿ ಬೀಲ್‌ ಯೋಜನೆ
ಎಲ್ಲಿಂದ ಎಲ್ಲಿಗೆ?: ಅಸ್ಸಾಂನ ದಿಬ್ರುಗಢದಿಂದ ಅರುಣಾಚಲ ಪ್ರದೇಶದ ಪಾಸೀ ಘಾಟ್‌

Advertisement

Udayavani is now on Telegram. Click here to join our channel and stay updated with the latest news.

Next