Advertisement

Modi: ಪರಿಹಾರಗಳಿಗೆ ಭಾರತ ಪ್ರಯೋಗಾಲಯ: ಮೋದಿ

12:29 AM Aug 20, 2023 | Team Udayavani |

ಬೆಂಗಳೂರು: ಭಾರತವು ಪರಿಹಾರಗಳಿಗೆ ಒಂದು ಪ್ರಯೋಗಾಲಯವಾಗಿದೆ. ದೇಶದಲ್ಲಿ ಯಶಸ್ವಿಯಾಗುವ ಪರಿಹಾರಗಳನ್ನು ವಿಶ್ವದ ಎಲ್ಲಿಗೆ ಬೇಕಾದರೂ ಸುಲಭವಾಗಿ ಅನ್ವಯಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಬೆಂಗಳೂರಿನಲ್ಲಿ ನಡೆದ ಜಿ20
ಡಿಜಿಟಲ್‌ ಎಕಾನಮಿಕ್‌ ವರ್ಕಿಂಗ್‌ ಗ್ರೂಪ್‌ ಸಚಿವರ ಸಭೆಯಲ್ಲಿ ವರ್ಚುವಲ್‌ ಮೂಲಕ ಭಾಗವಹಿಸಿ ಮಾತನಾ ಡಿದ ಅವರು, ಭಾರತದ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯವು ಜಗತ್ತಿನ ಸವಾಲುಗಳಿಗೆ ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ಒದಗಿಸಲಿದೆ ಎಂದರು.

ಭಾರತವು ವೈವಿಧ್ಯಮಯ ದೇಶವಾಗಿದೆ. ನಮ್ಮಲ್ಲಿ ಅನೇಕ ಭಾಷೆಗಳು ಮತ್ತು ನೂರಾರು ಪ್ರಾಂತೀಯ ಭಾಷೆಗಳಿವೆ. ಅನೇಕ ಧರ್ಮಗಳು ಮತ್ತು ಸಂಸ್ಕೃತಿಯ ಜನರು ಇಲ್ಲಿ ವಾಸಿಸುತ್ತಾರೆ. ಪುರಾತನ ಸಂಪ್ರದಾಯದಿಂದ ಹಿಡಿದು ನೂತನ ತಂತ್ರಜ್ಞಾನದವರೆಗೆ ಪ್ರತಿಯೊಬ್ಬರಿಗೆ ಬೇಕಾಗಿರುವ ಏನಾದರೂ ಒಂದನ್ನು ಭಾರತ ಹೊಂದಿದೆ ಎಂದು ಹೇಳಿದರು.

ಎಲ್ಲ ದೇಶಗಳಿಗೂ ಅನ್ವಯಿಸುವಂತೆ ಡಿಜಿಟಲ್‌ ಕೌಶಲ ಮಾರ್ಗಸೂಚಿ ತಯಾರಿಸುವಂತೆ ಹಾಗೂ ಡಿಜಿಟಲ್‌ ಕೌಶಲಕ್ಕೆ ಸಂಬಂಧಿಸಿ ವರ್ಚುವಲ್‌ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next