Advertisement

ರಾಹುಲ್‌ ದ್ರಾವಿಡ್‌ಗೆ “ಐಸಿಸಿ ಹಾಲ್‌ ಆಫ್ ಫೇಮ್‌’ಗೌರವ

06:00 AM Jul 03, 2018 | Team Udayavani |

ದುಬಾೖ: ಭಾರತದ ಮಾಜಿ ಕ್ರಿಕೆಟಗ ಹಾಗೂ ಕಿರಿಯರ ಕ್ರಿಕೆಟ್‌ ತಂಡದ ತರಬೇತುದಾರ, “ಗೋಡೆ’ ಖ್ಯಾತಿಯ ರಾಹುಲ್‌ ದ್ರಾವಿಡ್‌ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ (ಐಸಿಸಿ) ಪ್ರತಿಷ್ಠಿತ ಹಾಲ್‌ ಆಫ್ ಫೇಮ್‌ ಗೌರವ ಒಲಿದಿದೆ. ರಾಹುಲ್‌ ಜತೆಗೆ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಹಾಗೂ ಇಂಗ್ಲೆಂಡ್‌ ವನಿತಾ ತಂಡದ ಕ್ಲಾರಾ ಟಯ್ಲರ್‌ ಅವ ರಿಗೂ ಈ ಗೌರವವನ್ನು ನೀಡಲಾಗಿದೆ. ರಾಹುಲ್‌ ದ್ರಾವಿಡ್‌ ಈ ಗೌರವಕ್ಕೆ ಭಾಜನರಾದ ಭಾರತದ 5ನೇ ಕ್ರಿಕೆಟಿಗ. ಈ ಹಿಂದೆ ಮಾಜಿ ಕ್ರಿಕೆಟಿ ರಾದ ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ದೇವ್‌, ಸುನೀಲ್‌ ಗಾವಸ್ಕರ್‌ ಹಾಗೂ ಅನಿಲ್‌ ಕುಂಬ್ಳೆ ಅವರಿಗೆ ಈ ಗೌರವ ಒಲಿದಿತ್ತು.

Advertisement

ಎಲ್ಲರಿಗೂ ದ್ರಾವಿಡ್‌ ಧನ್ಯವಾದ
ಹಾಲ್‌ ಆಫ್ ಫೇಮ್‌ ಪ್ರಶಸ್ತಿ ಲಭಿಸಿದ ಕುರಿತು ವೀಡಿಯೋ ಸಂದೇಶವೊಂದನ್ನು ರವಾನಿಸಿರುವ ರಾಹುಲ್‌ ದ್ರಾವಿಡ್‌, “ಕ್ರಿಕೆಟಿಗನಾಗಿ ರೂಪುಗೊಳ್ಳುವ ಹಂತದಲ್ಲಿ ನಾನು ಯಾರನ್ನೆಲ್ಲ ಆದರ್ಶವಗಿ ಇರಿಸಿಕೊಂಡಿ ದ್ದೇನೋ, ಇವರೆಲ್ಲರನ್ನೂ ಹೊಂದಿರುವ ಐಸಿಸಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿಯಾದಿಗೆ ಈಗ ನನ್ನನ್ನೂ ಸೇರ್ಪಡೆಗೆಳಿಸಿರುವುದು ಖುಷಿ ತಂದಿದೆ. ಈ ಗೌರವ ನೀಡಿದ ಐಸಿಸಿಗೆ ಧನ್ಯ ವಾದಗಳು. ನನ್ನ ಕ್ರಿಕೆಟ್‌ ಜೀವನದಲ್ಲಿ ನನ್ನನ್ನು ಉತ್ತೇಜಿಸಿದ, ಬೆಂಬಲಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಸಲ್ಲುತ್ತ ವೆ’ ಎಂದಿದ್ದಾರೆ.

ವೃತ್ತಿ ಜೀವನದಲ್ಲಿ 164 ಟೆಸ್ಟ್‌ ಪಂದ್ಯಗಳಿಂದ 13,288 ರನ್‌ಗಳಿಸಿರುವ ದ್ರಾವಿಡ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಸರ್ವಕಾಲಿಕ ಬ್ಯಾಟ್ಸ್‌ಮನ್‌ಗಳ ಯಾದಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next