Advertisement

Ground water: ಭಾರತದ ಅಂತರ್ಜಲ ಪ್ರಮಾಣ 2080ಕ್ಕೆ 3 ಪಟ್ಟು ಇಳಿಕೆ ಸಾಧ್ಯ!

09:43 PM Sep 02, 2023 | Team Udayavani |

ನವದೆಹಲಿ: ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯ ಒಡಲನ್ನು ಬರಿದಾಗಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿಸಿದರೆ 2080ರ ವೇಳೆಗೆ ಭಾರತದಲ್ಲಿನ ಅಂತರ್ಜಲ ಮಟ್ಟವು ಪ್ರಸ್ತುತ ಮೂರು ಪಟ್ಟು ಕಡಿಮೆಯಾಗಲಿದೆ. ಇದರಿಂದ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ನೀರಿನ ಲಭ್ಯತೆಗೆ ಅಪಾಯ ಎದುರಾಗಲಿದೆ ಎಂದು ವರದಿಯೊಂದು ತಿಳಿಸಿದೆ.

Advertisement

ಅಮೆರಿಕದ ಮಿಚಿಗನ್‌ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನಾ ವರದಿಗಳ ಪ್ರಕಾರ, ಹೆಚ್ಚುತ್ತಿರುವ ತಾಪಮಾನವು ಭೂಮಿ ಮೇಲಿನ ನೀರಿನ ಲಭ್ಯತೆಯನ್ನು ಈಗಾಗಲೇ ಕಡಿಮೆ ಮಾಡುತ್ತಿದ್ದು, ಅಕಾಲಿಕ ಮಳೆಯಿಂದಾಗಿ ರೈತರು ಅಂತರ್ಜಲದ ಮೊರೆ ಹೋಗಲು ಮುಂದಾಗಿದ್ದಾರೆ. ಆದರೆ, ಕೃಷಿ ಬಳಕೆಗಾಗಿ ರೈತರು ಇದೇ ರೀತಿ ಅಂತರ್ಜಲವನ್ನು ಆಧರಿಸಿದರೆ, 2028ರ ವೇಳೆಗೆ ದೇಶದ 140 ಕೋಟಿ ಜನರ ಪೈಕಿ 3ನೇ ಒಂದು ಭಾಗದಷ್ಟು ಜನರು ನೀರಿನ ಸಮಸ್ಯೆ ಎದುರಿಸುವಂತಾಗುತ್ತದೆ. ಅಷ್ಟೇ ಅಲ್ಲದೇ, ಜಾಗತಿಕ ಆಹಾರ ಪೂರೈಕೆಯಲ್ಲಿ ಭಾರತ ಮಹತ್ತರ ಪಾತ್ರವಹಿಸುತ್ತಿದೆ. ಇಲ್ಲಿ ಅಂತರ್ಜಲ ಮಟ್ಟ ಕುಸಿತವಾದರೆ ಅದು ಪ್ರಾದೇಶಿಕವಾಗಿ ಮಾತ್ರವಲ್ಲದೇ, ಜಾಗತಿಕವಾಗಿಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next