Advertisement

GDP; ಭಾರತದ ಜಿಡಿಪಿ 15 ತಿಂಗಳ ಕನಿಷ್ಠ ಮಟ್ಟಕ್ಕೆ: 6.7% ದಾಖಲು

02:18 AM Aug 31, 2024 | |

ಹೊಸದಿಲ್ಲಿ: ಭಾರತ ಆರ್ಥಿಕ ಅಭಿವೃದ್ಧಿಯು 15 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, 2024-25ನೇ ವಿತ್ತ ವರ್ಷದ ಎಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.6.7 ದಾಖಲಿಸಿದೆ. ಕೃಷಿ ಹಾಗೂ ಸೇವಾ ಕ್ಷೇತ್ರಗಳ ಕಳಪೆ ಪ್ರದರ್ಶನದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ಹೇಳಿದೆ. ಇಷ್ಟಾಗಿಯೂ ಭಾರತವು ಜಗತ್ತಿನಲ್ಲೇ ಅತಿವೇಗವಾಗಿ ಬೆಳೆ ಯುತ್ತಿರುವ ಆರ್ಥಿಕತೆಯಾಗಿ ಉಳಿದಿದೆ. ಚೀನ ಎಪ್ರಿಲ್‌- ಜೂನ್‌ನಲ್ಲಿ ಶೇ.4.7 ಆರ್ಥಿಕಾಭಿವೃದ್ಧಿ ದಾಖಲಿಸಿದೆ. 2023ರ ಜನವರಿ-ಮಾರ್ಚ್‌ನಲ್ಲಿ ಭಾರತವು ಶೇ.6.2 ಅಭಿವೃದ್ಧಿಯನ್ನು ದಾಖಲಿಸಿತ್ತು ಎಂದು ಅಂಕಿ-ಸಂಖ್ಯೆಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next