ನವದೆಹಲಿ: ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರು ಜಗತ್ತಿನ ಮೂರನೇ ಅತ್ಯಂತ ಶ್ರೀಮಂತ!
ಬ್ಲೂಮ್‌ಬರ್ಗ್ ಸಿರಿವಂತರ ಶ್ರೇಯಾಂಕ ಪಟ್ಟಿಯಲ್ಲಿ ಹೀಗೆಂದು ಉಲ್ಲೇಖಿಸಲಾಗಿದೆ ವಿಶೇಷವೆಂದರೆ, ಬ್ಲೂಮ್‌ಬರ್ಗ್ ಸಿದ್ಧಪಡಿಸುವ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಏಷ್ಯಾದ ಪ್ರಮುಖ ಉದ್ದಿಮೆದಾರರೊಬ್ಬರು ಪ್ರವೇಶ ಪಡೆದಿದ್ದಾರೆ. ಅದಾನಿ ಅವರ ಒಟ್ಟು ಸಂಪತ್ತು 137.4 ಬಿಲಿಯನ್ ಡಾಲರ್.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 251 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿ ಮೊದಲ ಸ್ಥಾನದಲ್ಲಿ ಇದ್ದರೆ, ಅಮೆಜಾನ್ ಸಿಇಒ ಜೆಫ್ ಬೆಜೋಸ್ 153 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅದಾನಿ ಗ್ರೂಪ್‌ನ ಸಂಸ್ಥಾಪಕ ಗೌತಮ್ ಅದಾನಿ ಅವರು ಆಸ್ತಿಪಾಸ್ತಿಗೆ ಪ್ರಸಕ್ತ ವರ್ಷ 60.9 ಬಿಲಿಯನ್ ಡಾಲರ್ ಮೊತ್ತದಷ್ಟು ಹೆಚ್ಚುವರಿ ಸಂಪತ್ತು ಸೇರ್ಪಡೆಯಾಗಿದೆ. ಜತೆಗೆ ಅವರು ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರಿಗಿಂತ ಮುಂದಿದ್ದಾರೆ. ಕಲ್ಲಿದ್ದಲು, ಮಾಧ್ಯಮ, ಸಿಮೆಂಟ್, ವಿದ್ಯುತ್, ವಿಮಾನಯಾನ, ಬಂದರು ಕ್ಷೇತ್ರಗಳಲ್ಲಿ ಅವರ ಕಂಪನಿ ಹೂಡಿಕೆ ಮಾಡಿದೆ.
ಜುಲೈನಲ್ಲಿ ಪ್ರಕಟಗೊಂಡಿದ್ದ ಫೋರ್ಬ್ಸ್ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಆದಾನಿ ಅವರು ಜಗತ್ತಿನ ನಾಲ್ಕನೇ ಶ್ರೀಮಂತ ವ್ಯಕ್ತಿ ಎಂದು ಸ್ಥಾನ ಪಡೆದಿದ್ದರು. ಆ ಪಟ್ಟಿಯಲ್ಲಿ ಅವರು, ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗಿಂತ ಮುಂದೆ ಇದ್ದರು.