Advertisement

ದೇಶದ ಪ್ರಥಮ ಮಹಿಳಾ ಡಿಜಿಪಿ ಕಾಂಚನ್‌ ನಿಧನ

01:45 AM Aug 28, 2019 | mahesh |

ಮುಂಬೈ: ಭಾರತದ ಪ್ರಥಮ ಮಹಿಳಾ ಪೊಲೀಸ್‌ ಮಹಾನಿರ್ದೇಶಕಿ ಮತ್ತು ದೇಶದ 2ನೇ ಮಹಿಳಾ ಐಪಿಎಸ್‌ ಅಧಿಕಾರಿ ಕಾಂಚನ್‌ ಚೌಧರಿ ಭಟ್ಟಾಚಾರ್ಯ(72) ಸೋಮವಾರ ರಾತ್ರಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಾಂಚನ್‌ ದೀರ್ಘ‌ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಿಮಾಚಲ ಪ್ರದೇಶದವರಾದ ಕಾಂಚನ್‌ 1973ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ತಮ್ಮ 33 ವರ್ಷಗಳ ಸುದೀರ್ಘ‌ ವೃತ್ತಿ ಜೀವನದಲ್ಲಿ ಹಲವಾರು ಸೂಕ್ಷ್ಮ ಮತ್ತು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. 80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ‘ಉಡಾನ್‌’ ಧಾರಾವಾಹಿ ಕಾಂಚನ್‌ ಅವರ ಜೀವನದ ನೈಜ ಕಥೆಯನ್ನು ಆಧರಿಸಿದ್ದು. ನಿವೃತ್ತಿ ಬಳಿಕ ಅವರು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿ, 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next