Advertisement

ಸೇನಾ ಪ್ರಾಣಿಗಳಿಗೂ ಸ್ಮಾರಕ ; ರಕ್ಷಣಾ ಇಲಾಖೆಯಿಂದ ಶೀಘ್ರ ಅನುಮೋದನೆ?

10:11 AM Jan 25, 2020 | Hari Prasad |

ಹೊಸದಿಲ್ಲಿ: ಯುದ್ಧಗಳಲ್ಲಿ ಹುತಾತ್ಮರಾದ, ಕಾರ್ಯಾಚರಣೆಗಳಲ್ಲಿ ಪ್ರಾಣಾರ್ಪಣೆ ಮಾಡಿದ ಯೋಧರಿಗಾಗಿ ಸ್ಮಾರಕ ನಿರ್ಮಾಣ ಸಹಜ. ಇದೀಗ ಸೇನೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ ಪ್ರಾಣಿಗಳಿಗೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಮೊತ್ತಮೊದಲ ಸ್ಮಾರಕ ನಿರ್ಮಾಣವಾಗಲಿದೆ.

Advertisement

ಕಾರ್ಗಿಲ್‌ ಯುದ್ಧ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಜೀವ ಕಳೆದುಕೊಂಡ ಹೇಸರಗತ್ತೆಗಳು, ಕುದುರೆಗಳು, 300 ಶ್ವಾನಗಳು, 350 ಮಂದಿ ಹ್ಯಾಂಡ್ಲರ್‌ಗಳ ಕರ್ತವ್ಯಗಳನ್ನು ಅಲ್ಲಿ ದಾಖಲೀಕರಿಸಿ, ಸ್ಮರಿಸುವ ಪ್ರಯತ್ನ ಇದಾಗಿದೆ. ಸೇನೆಯ ವಿವಿಧ ವಿಭಾಗಗಳಲ್ಲಿ ಮಾನವರಂತೆಯೇ ನಿಸ್ಪೃಹೆಯಿಂದ ದೇಶ ಸೇವೆ ಮಾಡಿದ ಇತರ ಜೀವಿಗಳನ್ನು ಸ್ಮರಿಸುವ ವಿಶೇಷ ಕರ್ತವ್ಯದ ನಿಟ್ಟಿನಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗಿದೆ.

ಮೀರತ್‌ನ ರೆಮೌಂಟ್‌ ಆ್ಯಂಡ್‌ ವೆಟರ್ನರಿ ಕಾರ್ಪ್ಸ್ (ಆರ್‌ವಿಸಿ) ಸೆಂಟರ್‌ ಆ್ಯಂಡ್‌ ಕಾಲೇಜಿನಲ್ಲಿ ಅದು ನಿರ್ಮಾಣವಾಗಲಿದೆ. ಇದೇ ಕೇಂದ್ರದಲ್ಲಿ ಸೇನೆಯ ಬಳಕೆಗಾಗಿ ಇರುವ ಶ್ವಾನ, ಕುದುರೆ, ಹೇಸರಗತ್ತೆಗಳನ್ನು ಬೆಳೆಸಿ, ತರಬೇತಿ ನೀಡಲಾಗುತ್ತದೆ. ಪ್ರಸ್ತಾವಿತ ಸ್ಮಾರಕದ ಬಗ್ಗೆ ರಕ್ಷಣಾ ಇಲಾಖೆ ಶೀಘ್ರದಲ್ಲಿಯೇ ಅನುಮೋದನೆ ನೀಡುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿ ಮಾತನಾಡಿ, ಉದ್ದೇಶಿತ ಯೋಜನೆ ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಂತೆ ಇರಲಿದೆ. ಆದರೆ ಸಣ್ಣ ಪ್ರಮಾಣದಲ್ಲಿ ಇರಲಿದೆ ಎಂದಿದ್ದಾರೆ.

ಸ್ಮಾರಕದಲ್ಲಿ ಕೆತ್ತಲಾಗುವ ಪ್ರಾಣಿಗಳ ಪೈಕಿ ಮಾನಸಿ ಎಂಬ ಲ್ಯಾಬ್ರಡಾರ್‌ ತಳಿಯ ಶ್ವಾನ ಪ್ರಧಾನವಾಗಿದೆ. ಅದಕ್ಕೆ ತರಬೇತಿ ಮತ್ತು ಆರೈಕೆ ಮಾಡುತ್ತಿದ್ದ ಬಶೀರ್‌ ಅಹ್ಮದ್‌ ವಾರ್‌ಗೂ ಈಗಾಗಲೇ ಮರಣೋತ್ತರ ಗೌರವ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next