Advertisement

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

10:13 PM Jun 17, 2021 | Team Udayavani |

ಪುಣೆ: ದೇಹದ ತೂಕ ಇಳಿಕೆಗಾಗಿ ಖ್ಯಾತನಾಮರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಅದೇ ಮಾದರಿಯನ್ನು ನಾಯಿಗೂ ನಡೆಸಿದರೆ? ಪುಣೆಯಲ್ಲಿ ಇಂಥದ್ದೊಂದು ವಿಶೇಷ ಪ್ರಯತ್ನ ನಡೆಸಿ, ಯಶಸ್ವಿಯಾಗಿದೆ.

Advertisement

ಇಂಥ ಪ್ರಯತ್ನ ದೇಶದಲ್ಲಿಯೇ ಮೊದಲನೆಯದ್ದು ಎಂಬ ವಾದವೂ ಇದೆ. ಪುಣೆಯ ಯಾಸ್ಮಿನ್‌ ದಾರುವಾಲ ಎಂಬವರ “ದೀಪಿಕಾ’ ಎಂಬ 3 ವರ್ಷದ ಶ್ವಾನ ಅಗತ್ಯಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿತ್ತು. 30 ಕೆ.ಜಿ. ಇರಬೇಕಾದ ನಾಯಿ 50 ಕೆ.ಜಿ.ಗೆ ತಲುಪಿದಾಗ ಅವರಿಗೆ ತಲೆಬಿಸಿ ಆರಂಭವಾಯಿತು.

ಹಲವು ರೀತಿಯಲ್ಲಿ ತೂಕ ಕಡಿಮೆ ಮಾಡುವ ಪ್ರಯತ್ನ, ತಂತ್ರಗಳನ್ನು ನಡೆಸಿದರೂ ವ್ಯರ್ಥವಾದಾಗ ಪಶುವೈದ್ಯ ಡಾ| ನರೇಂದ್ರ ಪರದೇಶಿ ಅವರನ್ನು ದಾರುವಾಲ ಸಂಪರ್ಕಿಸಿದರು. ಕೊನೆಯ ಪ್ರಯತ್ನ ಎಂಬಂತೆ ತೂಕ ಇಳಿಕೆ ಶಸ್ತ್ರಚಿಕಿತ್ಸೆ (ಸ್ಲಿàವ್‌ ಗ್ಯಾಸ್ಟ್ರೆಕ್ಟಮಿ)ಗೆ ನಿರ್ಧರಿಲಾಯಿತು. ಪಶುವೈದ್ಯರಿಗೇ ಇದು ಹೊಸತಾಗಿತ್ತು. ಹೀಗಾಗಿ ಅವರು 6 ತಿಂಗಳ ಕಾಲ ಅದಕ್ಕಾಗಿ ಮತ್ತೂಬ್ಬ ಪಶುವೈದ್ಯ ಡಾ| ಶಶಾಂಕ್‌ ಶಾ ಬಳಿ ತರಬೇತಿ ಪಡೆದುಕೊಂಡರು.

ಜೂ. 6ರಂದು ಪುಣೆಯಲ್ಲಿ ಇಬ್ಬರು ವೈದ್ಯರು ದೀಪಿಕಾಗೆ ಸರ್ಜರಿ ನಡೆಸಿದರು. ಎರಡೂವರೆ ತಾಸು ಕಾಲ ನಡೆದ ಆಪರೇಷನ್‌ ಬಳಿಕ ಶ್ವಾನವೀಗ 5 ಕೆ.ಜಿ. ತೂಕ ಕಳೆದುಕೊಂಡಿದೆ. ಅದಕ್ಕೆ ಇನ್ನಿತರ ಆರೋಗ್ಯ ಸಮಸ್ಯೆಗಳೂ ಇದ್ದುದರಿಂದ ಸವಾಲಾಗಿತ್ತು ಎಂದು ಡಾ| ನರೇಂದ್ರ ಹೇಳಿದ್ದಾರೆ.

ನಡೆಯಲೂ ಆಗುತ್ತಿರಲಿಲ್ಲ
ಹೈಪೋಥೈರಾಯಿಡಿಸಂ ಮತ್ತು ಹೆಚ್ಚು ಕಾಬೊìಹೈಡ್ರೇಟ್‌ಯುಕ್ತ ಆಹಾರದಿಂದ ನಾಯಿಗೆ ಈ ಸಮಸ್ಯೆಯಾಗಿತ್ತು ಎಂದು ಡಾ| ನರೇಂದ್ರ ಹೇಳಿದ್ದಾರೆ.

Advertisement

ಆರೋಗ್ಯವಂತ ಶ್ವಾನಕ್ಕೆ ಬಾಡಿ ಮಾಸ್‌ ಇಂಡೆಕ್ಸ್‌ 80-90 ಇರಬೇಕು. ಆದರೆ ದೀಪಿಕಾಗೆ ಅದು 280-290 ಇತ್ತು. ದೀಪಿಕಾ ಅನ್ನಕ್ಕಿಂತ ಹೆಚ್ಚಾಗಿ ಮಾತ್ರೆಗಳನ್ನೇ ತಿನ್ನಬೇಕಾದ ಪರಿಸ್ಥಿತಿ ಇತ್ತು ಎಂದು ಅದರ ಮಾಲಕರು ಹೇಳಿದ್ದಾರೆ.

ಮತ್ತೂಂದು ಸರ್ಜರಿ
ಸದ್ಯ ಲ್ಯಾಪ್ರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈಗ ಈ ನಾಯಿ 45 ಕೆ.ಜಿ. ತೂಕ ಹೊಂದಿದೆ. ಈಗ ದೀಪಿಕಾ ನಡೆದಾಡುತ್ತಿದ್ದು, ಮನೆಯ ಒಳಗೆ ಸುತ್ತಾಡುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಹರ್ನಿಯಾ ತೆಗೆಯಲು ಮತ್ತೂಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಅಂದ ಹಾಗೆ ಸದ್ಯ ಮುಕ್ತಾಯವಾಗಿರುವ ಶಸ್ತ್ರಚಿಕಿತ್ಸೆಗೆ ಒಂದು ಲಕ್ಷ ರೂ. ವೆಚ್ಚವಾಗಿದೆ ಎಂದು ಯಾಸ್ಮಿನ್‌ ದಾರುವಾಲ ಹೇಳಿದ್ದಾರೆ. ಈ ಹಿಂದೆ ಅದರ ಆಹಾರಕ್ಕೆ ಪ್ರತೀ ತಿಂಗಳಿಗೆ 10 ಸಾವಿರ ರೂ. ವೆಚ್ಚ ಮಾಡಬೇಕಾಗುತ್ತಿತ್ತು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next