Advertisement
ಈ ರಾಕೆಟ್‌ಗೆ ರೂಮಿ-2024 ಎಂದು ಹೆಸರಿಡಲಾಗಿದೆ. ಚೆನ್ನೈಯ ಈಸ್ಟ್ ಕೋಸ್ಟ್ ರಸ್ತೆ ಬಳಿಯಿಂದ ಈ ರಾಕೆಟನ್ನು ಶನಿವಾರ ಬೆಳಿಗ್ಗೆ 7.25ಕ್ಕೆ ಉಡಾವಣೆ ಮಾಡಲಾಯಿತು. ಈ ಮೊದಲು 7 ಗಂಟೆಗೆ ಉಡಾವಣೆಯನ್ನು ಯೋಜಿಸಿದ್ದರೂ ಸಹ ಗಾಳಿಯ ಪ್ರಮಾಣ ಹೆಚ್ಚಿದ್ದ ಕಾರಣ ಉಡಾವಣ ಸಮಯವನ್ನು ಬದಲಾಯಿಸಲಾಗಿತ್ತು. ರಾಕೆಟ್‌ನ ಭಾಗಗಳು ಸಮುದ್ರಕ್ಕೆ ಬಿದ್ದಿದ್ದು, ಅದನ್ನು ನಮ್ಮ ಸಿಬಂದಿ ಸಂಗ್ರಹಿಸಲಿದ್ದಾರೆ ಎಂದು ಸ್ಪೇಸ್‌ಝೋನ್ ಸಿಇಒ ಆನಂದ್ ಮಹಾಲಿಂಗಂ ಅವರು ಹೇಳಿದ್ದಾರೆ.
ರುಮಿ ರಾಕೆಟ್‌ನಲ್ಲಿರುವ ಬಹುತೇಕ ಭಾಗ ಅಂದರೆ ಶೇ.75ರಷ್ಟು ಭಾಗವನ್ನು ಮತ್ತೆ ಬಳಕೆ ಮಾಡಿಕೊಳ್ಳಬಹುದು. ರಾಕೆಟ್‌ನ ಮುಖ್ಯಭಾಗ, ಉಪಗ್ರಹಗಳನ್ನು ಇಡುವ ತುದಿಯ ಭಾಗಗಳು ಉಡಾವಣೆಯ ಬಳಿಕ ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ಸಮುದ್ರದಲ್ಲಿ ಬೀಳಲಿವೆ. ಇವುಗಳನ್ನು ಸಂಗ್ರಹಿಸಿ ಮತ್ತೆ ಬಳಕೆ ಮಾಡಲಾಗುತ್ತದೆ.