Advertisement

ದೇಶದ ಮೊದಲ “ಮಂಕಿಪಾಕ್ಸ್‌ ಪರೀಕ್ಷಾ ಕಿಟ್‌’ಅನಾವರಣ

09:44 PM Aug 21, 2022 | Team Udayavani |

ವಿಶಾಖಪಟ್ಟಣಂ: ಮಂಕಿಪಾಕ್ಸ್‌ ಸೋಂಕಿನ ಪರೀಕ್ಷೆಗಾಗಿ ದೇಶೀಯವಾಗಿ ನಿರ್ಮಿಸಲಾದ ಮೊದಲ ಆರ್‌ಟಿ-ಪಿಸಿಆರ್‌ ಕಿಟ್‌ ಅನ್ನು ಆಂಧ್ರಪ್ರದೇಶದ ಮೆಡ್‌ಟೆಕ್‌ ಝೋನ್‌ನಲ್ಲಿ ಅನಾವರಣಗೊಳಿಸಲಾಗಿದೆ.

Advertisement

ಟ್ರಾನ್ಸ್‌ಏಷ್ಯಾ ಬಯೋ-ಮೆಡಿಕಲ್ಸ್‌ ಅಭಿವೃದ್ಧಿಪಡಿಸಿರುವ ಈ ಕಿಟ್‌ ಅನ್ನು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್‌ ಕುಮಾರ್‌ ಸೂದ್‌ ಬಿಡುಗಡೆಗೊಳಿಸಿದ್ದಾರೆ.

ಟ್ರಾನ್ಸ್‌ಏಷ್ಯಾ-ಎರ್ಬಾ ಮಂಕಿಪಾಕ್ಸ್‌ ಆರ್‌ಟಿ-ಪಿಸಿಆರ್‌ ಕಿಟ್‌ ಅನ್ನು ಬಳಸಲು ಸುಲಭವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಇದು ಸೋಂಕನ್ನು ಬೇಗನೆ ಹಾಗೂ ನಿಖರವಾಗಿ ಪತ್ತೆಹಚ್ಚುತ್ತದೆ ಎಂದು ಟ್ರಾನ್ಸ್‌ಏಷ್ಯಾ ಮುಖ್ಯಸ್ಥ ಸುರೇಶ್‌ ವಜಿರಾನಿ ಹೇಳಿದ್ದಾರೆ.

ಕಿಟ್‌ ಅನಾವರಣ ಕಾರ್ಯಕ್ರಮದಲ್ಲಿ ಐಸಿಎಂಆರ್‌ ಮಾಜಿ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ, ವೈಜ್ಞಾನಿಕ ಕಾರ್ಯದರ್ಶಿ ಅರಬಿಂದ ಮಿತ್ರ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next