ನವದೆಹಲಿ: ಭಾರತದ ಮೊದಲ ಹೈಡ್ರೋಜನ್ ಇಂಧನಾಧಾರಿತ ಬಸ್ ಸೇವೆ ಪ್ರಾಯೋಗಿಕವಾಗಿ ಲೇಹ್ ನಲ್ಲಿ ಆರಂಭಗೊಂಡಿದೆ. ಭವಿಷ್ಯದ ತಂತ್ರಜ್ಞಾನದ ಹೈಡ್ರೋಜನ್ ಆಧರಿತ ಬಸ್ ಸೇವೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ ಲೇಹ್ ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Brand Bangalore: ಬ್ರ್ಯಾಂಡ್ ಬೆಂಗಳೂರಿಗಾಗಿ 70 ಸಾವಿರಕ್ಕೂ ಅಧಿಕ ಸಲಹೆ
ಭಾರತದ ಅತೀ ದೊಡ್ಡ ಇಂಧನ ಉತ್ಪಾದನಾ ಕಂಪನಿ ಎನ್ ಟಿಪಿಸಿ ಈ ಪ್ರಾಜೆಕ್ಟ್ ಅನ್ನು ಜಾರಿಗೊಳಿಸಿದ್ದು ಲೇಹ್ ನಗರದಲ್ಲಿ ಹೈಡ್ರೋಜನ್ ಇಂಧನ ಸೌಲಭ್ಯದ ಐದು ಬಸ್ ಗಳು ಇನ್ನು ಕೆಲವೇ ದಿನಗಳಲ್ಲಿ ಸಂಚಾರ ಆರಂಭಿಸಲಿವೆ.
ಸುಮಾರು 2.5 ಕೋಟಿ ರೂಪಾಯಿ ವೆಚ್ಚದ ಹೈಡ್ರೋಜನ್ ಇಂಧನಾಧಾರಿತ ಬಸ್ ಗಳನ್ನು ಅಶೋಕ್ ಲೇಲ್ಯಾಂಡ್ ಸರಬರಾಜು ಮಾಡಲಿದೆ. ಪ್ರಸ್ತುತ ಲೇಹ್ ನಗರದಲ್ಲಿ ಸಂಚರಿಸುವ ಡೀಸೆಲ್ ಬಸ್ ಗಳ ಟಿಕೆಟ್ ಬೆಲೆಯನ್ನೇ ಹೈಡ್ರೋಜನ್ ಇಂಧನಾಧಾರಿತ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಿಗದಿಪಡಿಸಲಾಗಿದೆ.
ಒಂದು ವೇಳೆ ನಷ್ಟವಾದಲ್ಲಿ ಅದನ್ನು ಸರಿದೂಗಿಸಿಕೊಡುವುದಾಗಿ ಎನ್ ಟಿಪಿಸಿ ಹೇಳಿರುವುದಾಗಿ ಕಂಪನಿಯ ಎಕ್ಸಿಕ್ಯೂಟಿವ್ ಒಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಗುರುವಾರ ಮೊದಲ ಬಸ್ ಲೇಹ್ ತಲುಪಿತ್ತು. ಆದರೆ ಸ್ವಾತಂತ್ರ್ಯ ದಿನಾಚರಣೆಯನ್ನು ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿತ್ತು. ಭಾರೀ ಮಳೆ, ಪ್ರವಾಹ, ಭೂಕುಸಿತದಿಂದಾಗಿ ಬಸ್ ಸೇವೆ ಆರಂಭಿಸಿಲ್ಲವಾಗಿತ್ತು. ಶೀಘ್ರದಲ್ಲೇ ಹೈಡ್ರೋಜನ್ ಬಸ್ ಸಂಚಾರ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.
ಏನಿದು ಹೈಡ್ರೋಜನ್ ಬಸ್ಸು?
ಹೈಡ್ರೋಜನ್ ಬಸ್ಸನ್ನು ಒಂದು ರೀತಿಯಲ್ಲಿ ಎಲೆಕ್ಟ್ರಿಕ್ ಬಸ್ಸು ಎಂದೇ ಹೇಳಬಹುದು. ಏಕೆಂದರೆ ಇದೂ ಕೂಡ ಬ್ಯಾಟರಿ ಆಧಾರಿತವಾಗಿರುತ್ತದೆ. ಈ ಬಸ್ಸಿಗೆ ಹೈಡ್ರೋಜನ್ ಹಾಕಿದರೆ ಅದು ಆಮ್ಲಜನಕದ ಕಣಗಳೊಂದಿಗೆ ಸೇರಿಕೊಂಡು ವಿದ್ಯುತ್ ತಯಾರಿಸುತ್ತದೆ. ಇದರಿಂದಾಗಿ ಬಸ್‌ನಲ್ಲಿರುವ ಬ್ಯಾಟರಿ ಚಾರ್ಜ್ ಆಗುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ಇಂಧನ ಕೋಶ (ಎಫ್ಸಿಇವಿ) ಮೂಲಕ ಈ ಬಸ್ ಕೆಲಸ ಮಾಡುತ್ತದೆ. ಹೈಡ್ರೋಜನ್ ಮತ್ತು ಗಾಳಿಯನ್ನು ಬಳಕೆ ಮಾಡಿ ವಿದ್ಯುತ್ ಉತ್ಪಾದಿಸುತ್ತದೆ. ಯಾವುದೇ ರೀತಿಯ ಹೊಗೆ ಹೊರಗೆ ಬರುವುದಿಲ್ಲ. ಇಲ್ಲಿ ವಿದ್ಯುತ್ ತಯಾರಾದಂತೆಯೇ ನೀರಿನ ಆವಿ ಮತ್ತು ಶಾಖ ಗಾಳಿ ಉತ್ಪತ್ತಿಯಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎನ್ನುವುದು ತಜ್ಞರ ಮಾತು.
ಡೀಸೆಲ್‌ಗಿಂತ ಉತ್ತಮ:
ಹೈಡ್ರೋಜನ್ ಗಾಡಿ ಬಳಕೆ ಮಾಡುವುದರಿಂದ ನಿಮಗೆ ಡೀಸೆಲ್‌ಗಿಂತ ಅತಿ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದು.