Advertisement

India’s first ever ಬುಲೆಟ್‌ ಟ್ರೈನ್‌ ಟರ್ಮಿನಲ್‌ ಅನಾವರಣ ; Video

12:24 AM Dec 08, 2023 | Team Udayavani |

ಗಾಂಧಿನಗರ: ಅಹ್ಮದಾಬಾದ್‌ನಲ್ಲಿ ನಿರ್ಮಾಣಗೊಂಡಿರುವ ಭಾರತದ ಮೊಟ್ಟ ಮೊದಲ ಬುಲೆಟ್‌ ರೈಲು ಟರ್ಮಿನಲ್‌ನ ವೀಡಿಯೋವನ್ನು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ಟರ್ಮಿನಲ್‌ನ ವೀಡಿಯೋ ಭಾರೀ ವೈರಲ್‌ ಆಗಿದ್ದು, ನಿರ್ಮಾಣ ವೈಖರಿಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಹ್ಮದಾಬಾದ್‌ ಹಾಗೂ ಮುಂಬಯಿ ನಡುವೆ ಸಂಚಾರ ಕಲ್ಪಿಸಲಿರುವ ಬುಲೆಟ್‌ ರೈಲಿಗಾಗಿ ಈ ಟರ್ಮಿನಲ್‌ ನಿರ್ಮಾಣಗೊಂಡಿದೆ.

Advertisement

ಗಂಟೆಗೆ ಸರಿಸುಮಾರು 350 ಕಿ.ಮೀ. ವೇಗದಲ್ಲಿ ಚಲಿಸಲಿರುವ ಬುಲೆಟ್‌ ರೈಲು ಈ ಎರಡೂ ನಗರಗಳ ನಡುವಿನ ಪ್ರಯಾಣ ಸಮಯವನ್ನು 2 ಗಂಟೆ ಕಡಿಮೆಯಾಗಿಸಲಿದೆ. ಎಕ್ಸ್‌ನಲ್ಲಿ “ಭಾರತದ ಬುಲೆಟ್‌ ಟ್ರೈನ್‌ಗೆ ಟರ್ಮಿನಲ್‌’ ಎನ್ನುವ ತಲೆಬರಹ ನೀಡಿ ವೈಷ್ಣವ್‌ ವೀಡಿಯೋ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next