Advertisement

ಭಾರತದಲ್ಲಿ ಮೊದಲ ಇಂಟರ್ ಸಿಟಿ ಹೆಲಿಕಾಪ್ಟರ್ ಸೇವೆ

11:08 AM Oct 17, 2019 | Team Udayavani |

ಮುಂಬಯಿ: ಅಮೆರಿಕದ ಅತೀ ದೊಡ್ಡ ನಾಗರಿಕ ಹೆಲಿಕಾಪ್ಟರ್ ಸೇವಾ ಸಂಸ್ಥೆ ಫ್ಲೈ ಬ್ಲೇಡ್ ಈಗ ಭಾರತದಲ್ಲಿ ನಗರಗಳನ್ನು ಸಂಪರ್ಕಿಸುವ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಿದೆ. ಸದ್ಯ ಈ ತಿಂಗಳಾಂತ್ಯದಲ್ಲಿ ಈ ವಿಶೇಷ ಸೇವೆ ಆರಂಭವಾಗಲಿದೆ.

Advertisement

ಫ್ಲೈ ಬ್ಲೇಡ್ ಸಂಸ್ಥೆಯ ಭಾರತದಲ್ಲಿನ ಬ್ಲೇಡ್ ಇಂಡಿಯಾ ವಿಭಾಗ ಈ ಸೇವೆಯನ್ನು ಮೊದಲ ಬಾರಿ ಮಹಾರಾಷ್ಟ್ರದಲ್ಲಿ ಪರಿಚಯಿಸಲಿದೆ. ಇದು ಕೆಲಸ ಮಾಡಬೇಕಾದರೆ ನಾವು ಸಂಸ್ಥೆಯ ಮೊಬೈಲ್ ಆ್ಯಪ್ ಅಥವಾ ವೆಬ್ ಸೈಟ್ ನಲ್ಲಿ ಟಿಕೇಟ್ ಬುಕ್ ಮಾಡಬೇಕಾಗಿದೆ. ಇದರ ಟಿಕೇಟ್ ಬುಕ್ಕಿಂಗ್ ಮತ್ತು ಸೇವಾ ವಿಧಾನ ವಿಮಾನಗಳಂತೆ ನಡೆಯುತ್ತದೆ. ಒಂದು ಕಡೆಯಿಂದ ನಿರ್ದಿಷ್ಟ ಸಮಯಕ್ಕೆ ಹೆಲಿಕಾಪ್ಟರ್ ಮತ್ತೂಂದು ನಗರಕ್ಕೆ ಸಂಚರಿಸಲಿದೆ.

ಆರಂಭದಲ್ಲಿ ಪುಣೆ, ಮುಂಬಯಿ, ಮತ್ತು ಶಿರ್ಡಿ ನಗರಗಳನ್ನು ಇದು ಆಯ್ದುಕೊಂಡಿದ್ದು, ಸದ್ಯ ಈ ಮೂರು ನಗರದಲ್ಲಿ ಸೇವೆ ನೀಡಲಿದೆ. ಕಳೆದ ಮಾರ್ಚ್ ನಲ್ಲಿ ಈ ಸೇವೆ ಆರಂಭಿಸುವ ಗುರಿ ಇತ್ತಾದರೂ ಲೋಕಸಭಾ ಚುನಾವಣೆ ಇದ್ದ ಕಾರಣಕ್ಕೆ ಅದು ಈಡೇರಲಿಲ್ಲ ಎಂದು ಸಂಸ್ಥೆ ಹೇಳಿದೆ.

ಮೊದಲು ಎಲ್ಲಿಗೆ?
ತನ್ನ ಮೊದಲ ಸೇವೆಯನ್ನು ಪುಣೆಯಿಂದ ಪ್ರಾರಂಭಿಸಲಿದ್ದು, 6 ಪ್ರಯಾಣಿಕರನ್ನು ಹೊತ್ತು ಮುಂಬಯಿಗೆ ಪ್ರಯಾಣಿಸಲಿದೆ. ಬಳಿಕ ಮುಂಬಯಿಂದ ಶಿರ್ಡಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಚಲಿಸಲಿದ್ದು, ಅಲ್ಲಿಂದ ಪುಣೆಗೆ ವಾಪಸಾಗಲಿದೆ. ಸಂಜೆ ಮುಂಬಯಿಗೆ ತೆರಳಿ ವಾಪಸಾಗಲಿದೆ. ವಾರದಲ್ಲಿ 6 ದಿನಗಳು ಮಾತ್ರ ಸೇವೆ ನೀಡಲಿದ್ದು, ರವಿವಾರ ಸೇವೆ ಅಲಭ್ಯ.

ಒಟ್ಟು 2 ಕೆಲಿಕ್ಯಾಪ್ಟರ್ ಗಳನ್ನು ಈ ಸೇವೆಗಾಗಿ ಬಳಸಲಾಗುತ್ತಿದೆ. ಪ್ರಯಾಣಿಕರು ತಮ್ಮ ಜತೆ ಒಟ್ಟು 10 ಕೆ.ಜಿ.ಯಷ್ಟು ಮಾತ್ರ ವಸ್ತುಗಳನ್ನು ಕೊಂಡೊಯ್ಯಬಹುದಾಗಿದೆ. ಈ ತಿಂಗಳಾಂತ್ಯದಲ್ಲಿ ಈ ಸೇವೆ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next