ಹೊಸದಿಲ್ಲಿ: ದೇಶದ ಎಲ್ಲ ವಲಯಗಳೂ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಖ್ಯಾತಿಯನ್ನು ಭಾರತ ಕಾಯ್ದುಕೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದೇ ವೇಳೆ, ಮುಂದಿನ ಫೆ.1ರಂದು ಮಂಡನೆಯಾಗುವ ಬಜೆಟ್‌ನಲ್ಲಿ ದೊಡ್ಡಮಟ್ಟದ ಘೋಷಣೆಗಳೇನೂ ಇರುವುದಿಲ್ಲ, ಅದು ಕೇವಲ ಲೇಖಾನುದಾನ ಆಗಿರುತ್ತದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ದೇಶದ ಆರ್ಥಿಕತೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2014ರ ಬಳಿಕ ಆರ್ಥಿಕತೆಯಲ್ಲಾದ ಮಹತ್ವದ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಎರಡನೇ ತ್ತೈಮಾಸಿಕದಲ್ಲಿ ಆರ್ಥಿಕತೆ ಉತ್ತಮ ಪ್ರಗತಿ ಕಂಡಿದೆ. 2014ರಲ್ಲಿ ಭಾರತವು 10ನೇ ಅತಿಧೀ ದೊಡ್ಡ ಆರ್ಥಿಕತೆಯಾಗಿತ್ತು. ಕೇವಲ 8 ವರ್ಷಗಳಲ್ಲಿ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈ ವರ್ಷ ನ.9ರ ವರೆಗೆ ನೇರ ತೆರಿಗೆ ಸಂಗ್ರಹ ಶೇ.21.82ರಷ್ಟು ಹೆಚ್ಚಳವಾಗಿದೆ. ಮಾಸಿಕ ಜಿಎಸ್‌ಟಿ ಸಂಗ್ರಹ 1.6 ಲಕ್ಷ ಕೋಟಿ ರೂ.ಗೆ ಸ್ಥಿರಗೊಂಡಿದೆ ಎಂದಿದ್ದಾರೆ.
ಪಶ್ಚಿಮ ಘಟ್ಟ ವರದಿಗೆ ಕಾಯುತ್ತಿದ್ದೇವೆ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಅಂತಿಮಗೊಳಿಸಲು ರಚಿಸಿರುವ ಹೊಸ ಸಮಿತಿಯ ವರದಿಗಾಗಿ ಸರಕಾರ ಕಾಯುತ್ತಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಲಿವ್ ಇನ್ ರಿಲೇಶನ್‌ಶಿಪ್ ಎನ್ನುವುದು ಅಪಾಯಕಾರಿ ರೋಗವಾಗಿದೆ. ಅದನ್ನು ಸಮಾಜದಿಂದ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರಕಾರ ಕಾನೂನು ತರಬೇಕು.
ಧರಂಬೀರ್ ಸಿಂಗ್, ಹರಿಯಾಣ ಸಂಸದ