Advertisement
ದೇಶದ ಇಡೀ ಹಣಕಾಸು ವಲಯ ಈಗ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ಸಂಗತಿಯನ್ನು ಯಾರೂ ಕೂಡ ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಈ ಸಂಕಷ್ಟದಿಂದ ಪಾರಾಗಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕೆಲವು ಕಂಪನಿಗಳ ಸಾಲ ಬಾಕಿ ಪ್ರಕರಣದಿಂದಾಗಿ ಹಣಕಾಸು ವಲಯಕ್ಕೆ ಹಿನ್ನಡೆಯಾಗಿದೆ ಎಂದಿದ್ದಾರೆ. ಹಲವು ಆರ್ಥಿಕ ತಜ್ಞರು ಕೇಂದ್ರ ಸರಕಾರವನ್ನು ಎಚ್ಚರಿಸುತ್ತಾ ಬಂದಿದ್ದಾರೆ. ವಿತ್ತ ತಜ್ಞರ ಹೇಳಿಕೆಯನ್ನು ಕೇಂದ್ರ ಸರಕಾರ ನಿರಾಕರಿಸುತ್ತಲೇ ಬಂದಿತ್ತು.
ನೋಟು ಅಪಮೌಲೀಕರಣ, ಜಿಎಸ್ಟಿ ಸೇರಿದಂತೆ ಮೊದಲಾದ ಕ್ರಮಗಳು ದೇಶದ ಆರ್ಥಿಕತೆ ಮುಂದೆ ಸಂಕಷ್ಟವನ್ನು ತರಲಿದೆ ಎಂದು ವಿಪಕ್ಷಗಳು ಸೇರಿದಂತೆ ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದರು. ಮಾಜಿ ಪ್ರಧಾನಿ ಮನ್ಮೋಗನ್ ಸಿಂಗ್, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸರಕಾರಕ್ಕೆ ಈ ಹಿಂದೆಯೇ ಸಲಹೆ ನೀಡಿದ್ದು, ಆರ್ಥಿಕ ಹಿನ್ನಡೆಯ ಅಪಾಯವನ್ನು ಎಚ್ಚರಿಸಿದ್ದರು. ಆದರೆ ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿಯೂ ವಿತ್ತೀಯ ಪ್ರಗತಿ ದರ ಕುಂಠಿತಗೊಂಡಿದೆ. ಭಾರತ ದ ಈ ಹಿನ್ನಡೆಯಲ್ಲಿ ಜಗತ್ತಿನ ಆರ್ಥಿಕ ಸ್ಥಿತಿಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ಆರ್ಬಿಐ ಇತ್ತೀಚೆಗೆ ತನ್ನ ರೆಪೋ ದರವನ್ನು ಈ ವರ್ಷ 4ನೇ ಬಾರಿ ಇಳಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.