Advertisement

ಜೂನ್‌ ತ್ತೈಮಾಸಿಕ: ಶೇ.8.2ರ ಭರ್ಜರಿ GDP; 2 ವರ್ಷದಲ್ಲೇ ಅತ್ಯುತ್ತಮ

07:38 PM Aug 31, 2018 | udayavani editorial |

ಹೊಸದಿಲ್ಲಿ : ಕಳೆದ ಜೂನ್‌ ತ್ತೈಮಾಸಿಕದಲ್ಲಿ  ದೇಶದ ವಾರ್ಷಿಕ ಆರ್ಥಿಕ ಪ್ರಗತಿ, ಎರಡು ವರ್ಷಗಳಿಗೂ ಮೀರಿದ ಅವಧಿಯಲ್ಲಿ ದಾಖಲಾದುದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ, ಎಂದರೆ ಶೇ.8.2ರ ಭರ್ಜರಿ ಸಾಧನೆಯನ್ನು ದಾಖಲಿಸಿದೆ. ಉತ್ಪಾದನೆ ಮತ್ತು ಗ್ರಾಹಕ ಬಳಕೆ ರಂಗದಲ್ಲಿ ಆಗಿರುವ ಪ್ರಬಲ ನಿರ್ವಹಣೆಯೇ ಇದಕ್ಕೆ ಕಾರಣವಾಗಿದೆ.

Advertisement

ದೇಶದ ಜಿಡಿಪಿ ಮುಂಬರುವ ಅವಧಿಯಲಿ ಇದೇ ರೀತಿಯ ಪ್ರಬಲ ನಿರ್ವಹಣೆಯನ್ನು ತೋರಿದ್ದೇ ಆದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆಯನ್ನು ಏರುವುದಕ್ಕೆ ಅನುಕೂಲವಾಗಲಿದೆ, ಮಾತ್ರವಲ್ಲದೆ ಮೋದಿ ಅವರ ಆರ್ಥಿಕ ಸುಧಾರಣಾ ಕ್ರಮಗಳಿಂದ ವೇಗದ ಆರ್ಥಿಕ ಬೆಳವಣಿಗೆ ಆಗಿಲ್ಲ ಎಂಬ ಟೀಕಾಕಾರರ ಬಾಯಿಯನ್ನು ಮುಚ್ಚಿಸಲಿದೆ.

ಈ ತಾಜಾ ಅವಧಿಯ ವಾರ್ಷಿಕ ಆರ್ಥಿಕ ಪ್ರಗತಿಯು ರಾಯ್‌ಟರ್‌ ಅಂದಾಜಿಸಿದ್ದ ಶೇ.7.6ರ ಗತಿಯನ್ನು ಮೀರಿಸಿರುವುದು ಗಮನಾರ್ಹವಾಗಿದೆ. 2016ರ ಜನವರಿ – ಮಾರ್ಚ್‌ ತ್ತೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿಯ (ಜಿಡಿಪಿ) ದಾಖಲೆಯ ಶೇ.9.3 ತಲುಪಿತ್ತು. ಅನಂತರದಲ್ಲಿ ದಾಖಲಾಗಿರುವ ಗರಿಷ್ಠ ವಾರ್ಷಿಕ ಆರ್ಥಿಕ ಪ್ರಗತಿ ಈಗಿನ ತಾಜಾ ಶೇ.8.2ರದ್ದಾಗಿದೆ.

ಇದೇ ತ್ತೈಮಾಸಿಕದಲ್ಲಿ ಚೀನ ಶೇ.6.7ರ ಜಿಡಿಪಿ ದಾಖಲಿಸಿದ್ದು ಭಾರತ ಅದನ್ನು ಮೀರಿರುವುದು ಗಮನಾರ್ಹವೆಂದು ತಿಳಿಯಲಾಗಿದೆ. ಭಾರತದ ತಾಜಾ ವಾರ್ಷಿಕ ಆರ್ಥಿಕ ಪ್ರಗತಿಯಾಗಿರುವ ಶೇ.8.2, 2014ರಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲಿನ ತ್ತೈಮಾಸಿಕದಲ್ಲಿ ಕಾಂಗ್ರೆಸ್‌ ಸರಕಾರ ದಾಖಲಿಸಿದ್ದ ಆರ್ಥಿಕ ಪ್ರಗತಿ ದರಕ್ಕೆ ಇದು ಸಮಾನವಾಗಿರುವುದು ಕೂಡ ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next