Advertisement

ಸಾಗರದಾಳದ ಜೀವಿಗಳ ಅಧ್ಯಯನಕ್ಕೆ ನಿರ್ಧಾರ

12:11 AM Mar 19, 2022 | Team Udayavani |

ಹೊಸದಿಲ್ಲಿ: ಭೂಮಿಯಲ್ಲಿರುವ ಸರ್ವಜೀವಿಗಳು ಸಮುದ್ರದಾಳದಲ್ಲಿ ಸುಮಾರು 4ರಿಂದ 5 ಕಿ.ಮೀ. ಆಳದಲ್ಲಿರುವ ಶೀತೋಷ್ಣ ವಲಯದಲ್ಲಿ ರೂಪು ತಳೆ ದಿದ್ದವೆಂಬ ಸಿದ್ಧಾಂತಗಳನ್ನು ಪರೀಕ್ಷೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಸಾಹಸಕ್ಕೆ “ಡೀಪ್‌ ಓಷಿಯನ್‌ ಮಿಷನ್‌’ (ಡಿಒಎಂ) ಎಂದು ಹೆಸರಿಡಲಾಗಿದೆ.

Advertisement

ಅಸಲಿಗೆ, ಸಾಗರದಾಳದಲ್ಲಿ ಉಪಯೋಗಿಸಲ್ಪಡುವ ಕೆಲವಾರು ತಂತ್ರಜ್ಞಾನಗಳನ್ನು ಭಾರತ ಅಂದಾಜು, 4,077 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು ಅವುಗಳ ಪರೀಕ್ಷೆಗಾಗಿ ವಿಜ್ಞಾನಿಗಳು ಸಾಗರದ ಮೇಲ್ಮೆ„ಯಿಂದ 500 ಮೀಟರ್‌ಗಳವರೆಗೆ ಪ್ರಯಾಣ ಬೆಳೆಸಬೇಕಿತ್ತು. ಅದರ ಜತೆಯಲ್ಲೇ, “ಡೀಪ್‌ ಓಷಿ ಯನ್‌ ಮಿಷನ್‌’ ಕೈಗೊಂಡು ಜೀವಿಗಳ ಉಗಮದ ಬಗ್ಗೆ ಅಧ್ಯಯನವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಭೂವಿಜ್ಞಾನಿಗಳ ಇಲಾಖೆಯ ಕಾರ್ಯದರ್ಶಿ ಎಂ. ರವೀಂದ್ರನ್‌ ಹೇಳಿದ್ದಾರೆ.

“ನಾಲ್ಕರಿಂದ ಐದು ಕಿ.ಮೀ. ಆಳದವರೆಗಿನ ಸಾಗರದಾಳದಲ್ಲಿ ಸೂರ್ಯನ ಬೆಳಕು ಬೀಳುವುದಿಲ್ಲ. ಆದರೆ ಅಲ್ಲಿಯೂ ಜೀವಿಗಳಿರುತ್ತವೆ. ಅಷ್ಟು ಆಳದಲ್ಲಿ ಜೀವಿಗಳ ಉಗಮ ಹೇಗಾಯಿತು. ಅಲ್ಲಿ ಅವು ಏನನ್ನು ತಿಂದುಕೊಂಡು ಬದುಕುತ್ತವೆ. ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಮೂಲ ಸ್ಥಳ ಅದೇ ಆಗಿರುವುದು ಹೇಗೆ? ಭೂಮಿಯ ಮೇಲಿನ ಪ್ರಾಣಿ ಗಳಿಗೂ, ನಾಲ್ಕೈದು ಕಿ.ಮೀ. ಆಳದಲ್ಲಿರುವ ಸಾಗರದ ಲ್ಲಿರುವ ಜೀವಿಗಳಿಗೂ ಇರುವ ಸಾಮ್ಯತೆ ಅಥವಾ ವ್ಯತ್ಯಾಸಗಳೇನು? ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ನಿರ್ಧರಿಸಲಾಗಿದೆ. ಇದು, ಜೀವಿಗಳ ಉಗಮದ ಅಧ್ಯಯನಕ್ಕೆ ಹೊಸ ಪಥ ಕಲ್ಪಿಸುವ ನಿರೀಕ್ಷೆಯಿದೆ” ಎಂದು ರವೀಂದ್ರನ್‌ ಹೇಳಿದ್ದಾರೆ.

ಸಾಗರದಾಳದ ಗಣಿಗಾರಿಕೆಗೂ ದಾರಿ:  ಜೀವಿಗಳ ಅಧ್ಯಯನದ ಜತೆಗೆ ಸಮುದ್ರದಾಳದಲ್ಲಿರುವ ಲೋಹಗಳು, ಖನಿಜಗಳ ಬಗ್ಗೆಯೂ ಅಧ್ಯಯನ ಮಾಡಲಾಗುತ್ತದೆ. ಇಂಥ ಲೋಹಗಳು, ಖನಿಜಗಳ ನಿಕ್ಷೇಪಗಳನ್ನೂ ಪತ್ತೆ ಹಚ್ಚಿ ಗುರುತು ಹಾಕಲಾಗುತ್ತದೆ. ಮುಂದಿನ ದಿನಗಳಲ್ಲಿ ಸಾಗರದಾಳದ ಗಣಿಗಾರಿಕೆಗೆ ಇದು ನೆರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next