ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ದೈನಂದಿನ ಕೋವಿಡ್ -19 ಪ್ರಮಾಣವು ಭಾನುವಾರ 44,877 ಕ್ಕೆ ಇಳಿದಿದೆ. ಇದರಿಂದ ದೇಶದ ಒಟ್ಟು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 4,26,31,421 ಕ್ಕೆ ತಲುಪಿದೆ. ಭಾನುವಾರ ದಾಖಲಾದ ಸೋಂಕುಗಳ ಸಂಖ್ಯೆ ಶನಿವಾರಕ್ಕಿಂತ ಶೇಕಡಾ 11 ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 684 ಮಂದಿ ಕೋವಿಡ್ ಸೋಂಕಿತರು ನಿಧನ ಹೊಂದಿದ್ದಾರೆ, ಒಟ್ಟಾರೆ ಸಾವಿನ ಸಂಖ್ಯೆಯನ್ನು 5,08,665 ಕ್ಕೆ ಏರಿಕೆಯಾಗಿದೆ.
ಭಾರತದ ಚೇತರಿಕೆಯ ಪ್ರಮಾಣವು ಈಗ 97.55 ಪ್ರತಿಶತದಷ್ಟಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳು 73,398 ರಷ್ಟು ಕಡಿಮೆಯಾದ ಕಾರಣ, ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 5,37,045 ರಷ್ಟಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾಳೆ: ಓವೈಸಿ ಹೇಳಿಕೆ
ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 15,184 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 4,359 ಪ್ರಕರಣಗಳು, ಕರ್ನಾಟಕ ರಾಜ್ಯದಲ್ಲಿ 3,202 ಪ್ರಕರಣಗಳು, ತಮಿಳುನಾಡು 2,812 ಪ್ರಕರಣಗಳು ಮತ್ತು ರಾಜಸ್ಥಾನದಲ್ಲಿ 2,606 ಪ್ರಕರಣಗಳು ಪತ್ತೆಯಾಗಿದೆ. ಈ ಐದು ರಾಜ್ಯಗಳಿಂದ ಶೇಕಡಾ 62.76 ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲೇ 33.83 ಶೇಕಡಾ ಹೊಸ ಪ್ರಕರಣಗಳು ಪತ್ತೆಯಾಗಿದೆ.