ನವದೆಹಲಿ: ದೇಶಾದಾದ್ಯಂತ ಕೋವಿಡ್ -19 ಪ್ರಕರಣಗಳ ಸಂಖ್ಯೆ 2.1 ಲಕ್ಷಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 9,000ಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 6,000 ಜನ ಮೃತಪಟ್ಟಿದ್ದಾರೆ ಎಂದು ಮಾಧ‍್ಯಮದ ವರದಿ ತಿಳಿಸಿದೆ.
ಆಶಾದಾಯಕ ಬೆಳವಣಿಗೆಯೆಂದರೇ ಭಾರತದ ಒಟ್ಟು ಸೋಂಕಿತರಲ್ಲಿ ಸುಮಾರು 1 ಲಕ್ಷ ಜನರು ಗುಣಮುಖರಾಗಿದ್ದು, ಇತರೆ ದೇಶಗಳಿಗೆ ಹೋಲಿಸಿದೆ ಸೋಂಕಿನಿಂದ ಮುಕ್ತರಾದವರ ಪ್ರಮಾಣ ಶೇ 48.31ಕ್ಕೆ ಏರಿಕೆಯಾಗಿದೆ.
ಸದ್ಯ ಭಾರತದಲ್ಲಿ ಪ್ರಕರಣಗಳ ಸಂಖ್ಯೆ 2,07,615 ಇದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 217 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 688 ಸರ್ಕಾರಿ ಮತ್ತು 208 ಖಾಸಗಿ ಕೋವಿಡ್ -19 ಪತ್ತೆ ಪ್ರಯೋಗಾಲಯಗಳಿದ್ದು ಇವರೆಗೂ 41.03 ಲಕ್ಷ ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಮತ್ತೊಂದೆಡೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಗುಜರಾತ್, ದೆಹಲಿಗಳಲ್ಲಿ ಕೋವಿಡ್ 19 ಅಟ್ಟಹಾಸ ಬೀರುತ್ತಿದ್ದು ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ. ಮಾತ್ರವಲ್ಲದೆ ಕರ್ನಾಟಕವನ್ನೂ ಒಳಗೊಂಡಂತೆ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಮ್ ಮತ್ತು ಸಿಕ್ಕಿಂನಲ್ಲೂ ವೈರಾಣು ತನ್ನ ಪ್ರಭಾವ ಬೀರುತ್ತಿದೆ.
ಉತ್ತರಖಾಂಡ, ಹಿಮಾಚಲ್ ಪ್ರದೇಶ, ಆಂಧ‍್ರಪ್ರದೇಶ, ಕೇರಳ ರಾಜ್ಯಗಳಲ್ಲೂ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದೆ. ಹಾಗಾಗಿ ದೇಶಾದ್ಯಂತ ಸಕ್ರೀಯ ಪ್ರಕರಣಗಳ ಸಂಖ್ಯೆ 1ಲಕ್ಷಕ್ಕೆ ಏರಿಕೆಯಾಗಿದೆ.