Advertisement

ಭಾರತದ ವಾತಾವರಣ ಅಶುದ್ಧ: ಮತ್ತೆ ಕಿಡಿಕಾರಿದ ಟ್ರಂಪ್‌

09:14 PM Mar 01, 2021 | Team Udayavani |

ವಾಷಿಂಗ್ಟನ್‌: ಚೀನಾ, ಭಾರತ, ರಷ್ಯಾದಲ್ಲಿನ ಅಶುದ್ಧ ಹವಾಮಾನದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೂಮ್ಮೆ ಕಿಡಿಕಾರಿದ್ದಾರೆ.

Advertisement

ಅಧಿಕಾರ ಕಳೆದುಕೊಂಡ ಮೇಲೆ ಇದೇ ಮೊದಲಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು; ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ ಸರ್ಕಾರದ ನೀತಿಗಳ ವಿರುದ್ಧ ಹರಿಹಾಯ್ದರು.

ಹಿಂದಿನ ಟ್ರಂಪ್‌ ಸರ್ಕಾರ ವಿಶ್ವಸಂಸ್ಥೆಯ “ಪ್ಯಾರಿಸ್‌ ಹವಾಮಾನ ಒಪ್ಪಂದ’ದಿಂದ ಅಮೆರಿಕವನ್ನು ಹೊರತಂದಿತ್ತು. ಬೈಡೆನ್‌ ಸರ್ಕಾರ ಫೆ.19ರಂದು ಮತ್ತೆ ಆ ಒಪ್ಪಂದದ ವ್ಯಾಪ್ತಿಗೆ ಅಮೆರಿಕವನ್ನು ಸೇರಿಸಿದೆ. “ಅಮೆರಿಕ ಸ್ವತ್ಛವಾಗಿದೆ. ಆದರೆ ಚೀನಾ, ಭಾರತ, ರಷ್ಯಾ ವಾತಾವರಣ ಅಶುದ್ಧವಾಗಿದೆ. ಅದಕ್ಕೆ ಅಮೆರಿಕವೇಕೆ ಬೆಲೆ ತೆರಬೇಕು? ಆ ಒಪ್ಪಂದದ ಪರಿಣಾಮ ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗನಷ್ಟವಾಗಿದೆ’ ಎನ್ನುವುದು ಟ್ರಂಪ್‌ ಅಭಿಮತ.

ಇದನ್ನೂ ಓದಿ:ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next