Advertisement

ಜ್ಞಾನ-ವಿಜ್ಞಾನದಲ್ಲಿ ಭಾರತದ ಸಾಧನೆ ಅಪಾರ: ಡಾ| ಮಹಾಂತ ದೇವರು

05:25 PM Dec 18, 2023 | Team Udayavani |

ತೇರದಾಳ: ಅಂದು ಭಾರತವನ್ನು ಕಡೆಗಣಿಸಿದ್ದ ಇಂಗ್ಲೆಂಡ್‌, ಅಮೆರಿಕಾ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ನಮ್ಮ ರಾಷ್ಟ್ರವನ್ನು ನೋಡುವ ದೃಷ್ಟಿ ಬದಲಾಗಿ ಶ್ರೇಷ್ಠ ಭಾರತ ಎಂಬುದಾಗಿ ಅರ್ಥೈಸಿಕೊಂಡಿರುವುದು ಹೆಮ್ಮೆ. ಇದಕ್ಕೆ ನಮ್ಮಲ್ಲಾದ ಹಲವು ಬದಲಾವಣೆಗಳೆ ಕಾರಣ. ಉತ್ತಮ ಶಿಕ್ಷಣ ಪಡೆದ ನಮ್ಮವರು ಜ್ಞಾನ, ವಿಜ್ಞಾನದಲ್ಲಿ ಮಾಡಿದ ಸಾಧನೆ ಅಪಾರವಾಗಿದೆ ಎಂದು ಶೇಗುಣಸಿ ವಿರಕ್ತಮಠದ ಡಾ| ಮಹಾಂತ ದೇವರು ಹೇಳಿದರು.

Advertisement

ಪಟ್ಟಣದ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆ ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜಿನ ವಾರ್ಷಿಕೋತ್ಸವ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಅಕ್ಷರದ ಜತೆಗೆ ಸಂಸ್ಕಾರ ಕಲಿಸಬೇಕಿದೆ. ಮಕ್ಕಳ ಮನಸ್ಸು ವಿಕಸಿತವಾಗುವಂತಹ ಶಿಕ್ಷಣ ನೀಡಬೇಕಿದೆ.
ಅಗತ್ಯಬಿದ್ದರೆ ಈ ಸಂಸ್ಥೆಯ ಮಕ್ಕಳಿಗೆ ಮೌಲ್ಯಶಿಕ್ಷಣದ ಶಿಬಿರ ನಡೆಸಲು ಸಿದ್ಧರಾಗಿರುವುದಾಗಿ ಹೇಳಿದರು.

ಹಿರಿಯ ಸಾಹಿತಿ ಸಿದ್ದು ದಿವಾನ ಮಾತನಾಡಿ, ಪಾಲಕರು ಮಕ್ಕಳ ಜತೆ ಬೆರೆಯಬೇಕು. ಅವರಲ್ಲಿನ ಭಯ ಹೋಗಲಾಡಿಸಬೇಕು.
ಸಾಮಾಜಿಕ ಮೌಲ್ಯ ಬಿತ್ತುವ ಕೆಲಸ ಶಾಲೆಗಳೊಂದಿಗೆ ಮನೆಯಿಂದಲೂ ನಡೆಯಬೇಕಿದೆ ಎಂದರು.

ತೇರದಾಳ ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣುರ, ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಮಾತನಾಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ| ಶಂಕರ ಅಥಣಿ, ಚೇರಮನ್‌ ಮಹೇಶ ಯಾದವಾಡ ಉದ್ಘಾಟಿಸಿದರು. ಶಂಕರ
ಮಂಗಸೂಳಿ, ಪ್ರಕಾಶ ಕಾಲತಿಪ್ಪಿ, ಬಿಆರ್‌ಸಿ ರಮೇಶ ಅವಟಿ, ಸಿಆರ್‌ಪಿ ಎ.ಆರ್‌. ಮುಧೋಳ, ಆಡಳಿತಾಧಿಕಾರಿ ಎಂ.ಬಿ.ಮಾಳೇದ, ಪ್ರಾಚಾರ್ಯ ಜಾಯ್‌ ಸೆಬ್‌ ಸ್ಟೇನ್‌, ಆಡಳಿತ ಮಂಡಳಿಯವರು, ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು. ಮಕ್ಕಳಿಗೆ ಪಾರಿತೋಷಕ ವಿತರಣೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next