Advertisement

ನೈನಿಟಾಲ್‌ನಲ್ಲಿ ಏಷ್ಯಾದ ಅತಿ ದೊಡ್ಡ ಲಿಕ್ವಿಡ್‌ ಮಿರರ್‌ ಟೆಲಿಸ್ಕೋಪ್‌

09:44 AM Jun 04, 2022 | Team Udayavani |

ನವದೆಹಲಿ: ಉತ್ತರಾಖಾಂಡದ ನೈನಿಟಾಲ್‌ನಲ್ಲಿರುವ ಪರ್ವತವೊಂದರ ತುದಿಯಲ್ಲಿ, ಭೂಮಿಯಿಂದ ಸುಮಾರು 2,450 ಮೀಟರ್‌ಗಳ ಎತ್ತರದಲ್ಲಿ ದೈತ್ಯ ಟೆಲಿಸ್ಕೋಪ್‌ ಒಂದನ್ನು ಭಾರತೀಯ ವಿಜ್ಞಾನಿಗಳು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು, ದೇಶದ ಮೊದಲ ಹಾಗೂ ಏಷ್ಯಾದಲ್ಲೇ ಅತಿ ದೊಡ್ಡ ಲಿಕ್ವಿಡ್‌- ಮಿರರ್‌ ಟೆಲಿಸ್ಕೋಪ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

“ಇಂಟರ್‌ನ್ಯಾಷನಲ್‌ ಲಿಕ್ವಿಡ್‌ ಮಿರರ್‌ ಟೆಲಿಸ್ಕೋಪ್‌’ (ಐಎಲ್‌ಎಂಟಿ) ಎಂದು ಕರೆಯಲ್ಪಡುವ ಈ ದೂರದರ್ಶಕ ಯಂತ್ರವನ್ನು ಬಾಹ್ಯಾಕಾಶ ತ್ಯಾಜ್ಯಗಳನ್ನು ಪತ್ತೆ ಹಚ್ಚಲು ಹಾಗೂ ವಿವಿಧ ನಕ್ಷತ್ರಪುಂಜಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನೈನಿಟಾಲ್‌ನಲ್ಲಿರುವ ಆರ್ಯಭಟ ವೀಕ್ಷಣಾ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ (ಏರೀಸ್‌) ದೇವಸ್ಥಳ ಅಬ್ಸರ್ವೇಟರಿ ಕ್ಯಾಂಪಸ್‌ನಲ್ಲಿ ಈ ದೂರದರ್ಶಕ ಯಂತ್ರವನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಪಾದರಸದ ತೆಳು ಹಾಳೆಯಿರುವ, 4 ಮೀಟರ್‌ ವ್ಯಾಸದ ತಿರುಗುವ ಕನ್ನಡಿಯಿದೆ. ಇದಕ್ಕೆ ಪಾಲಿಸ್ಟರ್‌ನಿಂದ ತಯಾರಿಸಿದ ಮಿಲಾರ್‌ ಉತ್ಪನ್ನದ ಮತ್ತೂಂದು ತೆಳು ಹಾಳೆಯನ್ನು ಹೊದಿಸಲಾಗಿದ್ದು ಇದು ಪಾದರಸದ ಹಾಳೆಗೆ ಗಾಳಿಯಿಂದ ಸುರಕ್ಷತೆ ನೀಡುತ್ತದೆ.ಈ ವರ್ಷಾಂತ್ಯದ ಹೊತ್ತಿಗೆ ಕಾರ್ಯಾರಂಭ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next