ನವದೆಹಲಿ: ಭಾರತದ ಪ್ರಥಮ “ಗೀರ್” ತಳಿಯ ಕರುವಿನ ಸಂತಾನವನ್ನು ಸೃಷ್ಟಿಸಿದ್ದು, ಇದಕ್ಕೆ ಗಂಗಾ ಎಂದು ನಾಮಕರಣ ಮಾಡಲಾಗಿದ್ದು, 32 ಕೆಜಿ ತೂಕವಿರುವುದಾಗಿ ರಾಷ್ಟ್ರೀಯ ಡೈರಿ ಸಂಶೋಧನಾ ಇನ್ಸ್ ಟಿಟ್ಯೂಟ್(NDRI) ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಚೇತರಿಕೆಯ ಹಾದಿಯಲ್ಲಿ ಅಮಿತಾಭ್: ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಬಂದ ಬಿಗ್ ಬಿ
ಹರ್ಯಾಣದ ಕರ್ನಾಲ್ ನಲ್ಲಿರುವ ಎನ್ ಡಿಆರ್ ಐ ದೇಶೀಯ ಹಸುವಿನ ತಳಿಗಳಾದ ಗೀರ್ ಮತ್ತು ಸಾಯಿವಾಲ್ ಗಳ ತದ್ರೂಪಿ ಸಂತಾನ ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿರುವುದಾಗಿ ವಿವರಿಸಿದೆ.
ದೇಶೀಯ ಗೋ ತಳಿಯ ತದ್ರೂಪಿಯನ್ನು ಸೃಷ್ಟಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಹೊರಟಿರುವ ಎನ್ ಡಿಆರ್ ಐ ಇದೀಗ ದೇಶದ ಮೊದಲ ದೇಶೀಯ ಹಸುವಿನ ತಳಿಯಾದ ಗೀರ್ ತದ್ರೂಪಿ ಸಂತಾನವನ್ನು ಯಶಸ್ವಿಯಾಗಿ ಸೃಷ್ಟಿಸಿದಂತಾಗಿದೆ.
ಭಾರತದ ಗೋ ಪರಂಪರೆಯಲ್ಲಿ ಹೈನುಗಾರಿಕೆ ತಳಿಗಳಲ್ಲಿ ಗೀರ್ ಗೆ ವಿಶಿಷ್ಟ ಸ್ಥಾನವಿದೆ. ಗುಜರಾತಿನ ಸೌರಾಷ್ಟ್ರ ಸಮೀಪದ ಗೀರ್ ಅರಣ್ಯಪ್ರದೇಶ ಇವುಗಳ ಮೂಲಸ್ಥಾನವಾಗಿದೆ. ಗೀರ್ ಭಾರತದ ಅತ್ಯಂತ ಪ್ರಾಚೀನ ತಳಿಯಾಗಿದ್ದು, ಇದು ಅತೀ ಹೆಚ್ಚು ಹಾಲು ಕೊಡುವ ತಳಿಯಾಗಿದೆ.
ಗೀರ್ ನ ವಿದೇಶಿ ತಳಿಯ ಹೆಸರು ಬ್ರಹ್ಮನ್. ಗೀರ್ ಅದ್ಭುತ ರೋಗ ನಿರೋಧಕ ಶಕ್ತಿ ಮತ್ತು ಹೆಚ್ಚು ಹಾಲು ಕೊಡುವ ಸಾಮರ್ಥ್ಯದ ಮೂಲಕ ವಿಶ್ವಮನ್ನಣೆಗಳಿಸಲು ಕಾರಣವಾಗಿದೆ. ಕೆಂಪುಮಿಶ್ರಿತ ಕಂದುಬಣ್ಣ, ಅಗಲ ಮುಖ, ಜೋತಾಡುವ ಕಿವಿಗಳು ಗೀರ್ ಹಸುವಿನ ಲಕ್ಷಣವಾಗಿದೆ. ಈ ಜೋತಾಡುವ ಕಿವಿಗಳು ಕೆಳಗೆ ಒಂದಕ್ಕೊಂದು ತಾಕಿದರೆ ಅದನ್ನು ಪರಿಶುದ್ಧ ಗೀರ್ ತಳಿಯಾಗಿ ಗುರುತಿಸುತ್ತಾರೆ.