Advertisement
ದುರಂತದಲ್ಲಿ ಮೃತಪಟ್ಟ ಭಾರತೀಯ ಪ್ರಜೆಗಳನ್ನು ಉತ್ತರ ಪ್ರದೇಶದವರಾದ ಅಭಿಷೇಕ್ ಖುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್‌ಭರ್, ಸೋನು ಜೈಸ್ವಾಲ್ ಮತ್ತು ಸಂಜಯ ಜೈಸ್ವಾಲ್ ಎಂದು ಗುರುತಿಸಲಾಗಿದೆ.
Related Articles
Advertisement
ಎಲ್ಲ ವಿಮಾನಗಳ ತಪಾಸಣೆಗೆ ನಿರ್ಧಾರ: ಪ್ರಯಾಣಿಕ ವಿಮಾನ ದುರಂತದ ಬೆನ್ನಲ್ಲೇ ನೇಪಾಲ ಸರಕಾರವು ಎಲ್ಲ ದೇಶೀಯ ವಿಮಾನಗಳ ತಾಂತ್ರಿಕ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಯೇಟಿ ಏರ್‌ಲೈನ್ಸ್‌ನ ವಿಮಾನ ಪತನದ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲುವಟಾರ್‌ನಲ್ಲಿ ಸಂಪುಟ ಸಭೆ ನಡೆಸಲಾಗಿದೆ. ಘಟನೆಯ ತನಿಖೆಗಾಗಿ ವಿಮಾನಯಾನದ ಮಾಜಿ ಕಾರ್ಯದರ್ಶಿ ನಾಗೇಂದ್ರ ಮಿರೆ ನೇತೃತ್ವದ ಐವರು ಸದಸ್ಯರ ಸಮಿತಿ ರಚಿಸಲಾಗಿದೆ.
ಪತನಕ್ಕೂ ಮುನ್ನ ಓಲಾಡಿದ್ದ ವಿಮಾನ!ವಿಮಾನವು ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಆಗಸದಲ್ಲಿ ಓಲಾಡುತ್ತಿದ್ದ ವೀಡಿಯೋವೊಂದು ವೈರಲ್ ಆಗಿದೆ. ವಿಮಾನವು ಏಕಾಏಕಿ ನೆಲಕ್ಕೆ ಹತ್ತಿರ ಬಂದು, ಮತ್ತೆ ಮೇಲೇರಿ ಅಪಾಯಕಾರಿಯಾಗಿ ಓಲಾಡುತ್ತಾ ಸಾಗುತ್ತದೆ. ಇದಾದ ಕೆಲವು ಸೆಕೆಂಡುಗಳಲ್ಲೇ ಭಾರೀ ಶಬ್ದದೊಂದಿಗೆ ಅದು ಪತನಗೊಳ್ಳುತ್ತದೆ. ಈ ವೀಡಿಯೋವನ್ನು ವ್ಯಕ್ತಿಯೊಬ್ಬರು ಮೊಬೈಲ್ ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ.