Advertisement

ಭಾರತೀಯರೂ ದೇಶ ವಿಭಜನೆಗೆ ಕಾರಣರು!

08:52 AM Oct 29, 2018 | Team Udayavani |

ಹೊಸದಿಲ್ಲಿ: ದೇಶ ವಿಭಜನೆಗೆ ಪಾಕಿಸ್ಥಾನ ಮಾತ್ರವಲ್ಲ. ಭಾರತೀಯರೂ ಕಾರಣರು ಎಂದು ಹೇಳುವ ಮೂಲಕ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

Advertisement

ನಾವೂ ದೇಶ ವಿಭಜನೆಗೆ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ನಾವು ಸಿದ್ಧವಿಲ್ಲ. ಪಾಕಿಸ್ಥಾನಿಯರು ಹಾಗೂ ಬ್ರಿಟಿಷರೇ ದೇಶ ವಿಭಜನೆಗೆ ಕಾರಣ ಎಂದು ನಾವು ನಂಬುತ್ತೇವೆ. ಅಷ್ಟೇ ಅಲ್ಲ, ಇದು 1947 ಆಗಸ್ಟ್‌ 11 ರಂದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮಾಡಿದ ಭಾಷಣದಲ್ಲೂ ತಿಳಿದುಬರುತ್ತದೆ. ಆರಂಭದಲ್ಲಿ ತಾನು ವಿಭಜನೆಗೆ ವಿರೋಧಿಸಿದ್ದರೂ, ದೇಶವನ್ನು ಒಂದಾಗಿಸಿರಲು ವಿಭಜನೆ ಮಾಡುವುದು ಅಗತ್ಯ ಎಂದು ಮನಗಂಡಿದ್ದೇನೆ ಎಂಬುದಾಗಿ ಪಟೇಲ್‌ ಹೇಳಿದ್ದರು. ಆದರೆ ರಾಜಕಾರಣದಲ್ಲಿ ಯಾರನ್ನಾದರೂ ಹೊಣೆಗಾರರನ್ನಾಗಿಸಬೇಕಿತ್ತು. ಹೀಗಾಗಿ ಮುಸ್ಲಿಮರನ್ನು ಇದಕ್ಕೆ ಹೊಣೆಗಾರರನ್ನಾಗಿಸಲಾಯಿತು.

ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ, ಅನ್ಸಾರಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ತಾನು ಮುಸ್ಲಿಂ ಪರ ವ್ಯಕ್ತಿ ಎಂದು ತೋರಿಸಲು ಅನ್ಸಾರಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.