Advertisement

ಪಾಕ್ ಮೇಲೆ ಪ್ರತೀಕಾರ ; IAF ಸಾಹಸಕ್ಕೆ ದೇಶವಾಸಿಗಳ ಸೆಲ್ಯೂಟ್

10:35 AM Feb 26, 2019 | Karthik A |

ಫೆಬ್ರವರಿ 14ರಂದು ಸಿ.ಆರ್.ಪಿ.ಎಫ್. ಯೋಧರು ಸಾಗುತ್ತಿದ್ದ ವಾಹನಗಳ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡಿ 40 ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಘಟನೆಗೆ ದೇಶಕ್ಕೆ ದೇಶವೇ ಜೈಶ್ ಉಗ್ರರು ಮತ್ತು ಉಗ್ರಗಾಮಿಗಳ ತವರು ರಾಷ್ಟ್ರ ಪಾಕಿಸ್ಥಾನದ ಮೇಲೆ ಕಿಡಿಕಿಡಿಯಾಗಿದ್ದರೂ. ವಿಶ್ವದ ಹಲವು ರಾಷ್ಟ್ರಗಳೂ ಸಹ ಈ ದಾಳಿಯನ್ನು ಖಂಡಿಸಿ ಭಾರತಕ್ಕೆ ನೈತಿಕ ಬೆಂಬಲವನ್ನು ಘೋಷಿಸಿದ್ದವು. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಯೋಧರ ಹತ್ಯೆಗೆ ಸೂಕ್ತ ಪ್ರತೀಕಾರ ತೆಗೆದುಕೊಂಡೇ ತೀರುವುದಾಗಿ ದೇಶವಾಸಿಗಳಿಗೆ ಆಶ್ವಾಸನೆ ನೀಡಿದ್ದರು. ಇದಾಗಿ 12 ದಿನಗಳ ಬಳಿಕ ಇಂದು ನಮ್ಮ ವಾಯುಸೇನೆಯ ಮಿರಾಜ್ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿರುವ ಉಗ್ರ ಶಿಬಿರಗಳನ್ನು ನಾಶಮಾಡಿ ಸುರಕ್ಷಿತವಾಗಿ ಹಿಂದಿರುಗಿವೆ ಮತ್ತು ಪಾಕಿಸ್ತಾನ ಕಡೆಯಿಂದ ನಡೆಯಬಹುದಾದ ಯಾವುದೇ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ನಮ್ಮ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ.

Advertisement

ಭಾರತೀಯ ವಾಯುಪಡೆಯ ಈ ದಿಟ್ಟ ದಾಳಿಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಿನಿ ತಾರೆಯರು, ರಾಜಕೀಯ ನಾಯಕರು, ಉದ್ಯಮಿಗಳ ಸಹಿತ ಜನಸಾಮಾನ್ಯರು ಸಹ ನಮ್ಮ ವಾಯುಪಡೆಯ ದಾಳಿಯ ಸಾಹಸಕ್ಕೆ ‘ಸೆಲ್ಯೂಟ್’ ಅನ್ನುತ್ತಿದ್ದಾರೆ. ಟ್ವಿಟರ್ ನಲ್ಲಂತೂ ಇಂದಿನ ಈ #AirStrike ನಡೆಸಿದ ವಾಯುಪಡೆಯ ಈ ಸಾಹಸವೇ ಟ್ರೆಂಡಿಂಗ್ ಆಗುತ್ತಿದೆ. ಯಾರೆಲ್ಲಾ ಏನೇನು ಟ್ವೀಟ್ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ತಮ್ಮ ಆಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ಹಿಂದಿ ಕವನದ ಸಾಲನ್ನು ಉಲ್ಲೇಖಿಸುವ ಮೂಲಕ ಇಂದಿನ ಈ ವಾಯುದಾಳಿಯ ಸಾಹಸವನ್ನು ಆಭಿನಂದಿಸಿದ್ದಾರೆ ಮತ್ತು ಪಾಕಿಸ್ಥಾನಕ್ಕೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ನಿವೃತ್ತ ಮೇಜರ್ ಗೌರವ್ ಆರ್ಯ ಅವರು ಟ್ವೀಟ್ ಮಾಡಿ ‘ಪುಲ್ವಾಮ ದಾಳಿಯ ಬಳಿಕ ಕೆಲವೊಂದು ರೋಗಗ್ರಸ್ಥ ಮನಸ್ಸುಗಳು ನಮ್ಮತ್ತ ನೋಡಿ ಅಪಹಾಸ್ಯ ಮಾಡಿದ್ದವು. ಆದರೆ ಇವತ್ತು ನಮ್ಮ ಯೋಧರ ಸಾಹಸ ನೋಡಿ ಹೆಮ್ಮೆಯಿಂದ ನಗುವ​​​​​​​ ಸರದಿ ನಮ್ಮದಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Advertisement

ಬಾಲಿವುಡ್ ನಟ ಸಿಂಗಂ ಖ್ಯಾತಿಯ ಅಜಯ್ ದೇವಗನ್ ಅವರು ತಮ್ಮ ಟ್ವೀಟ್ ನಲ್ಲಿ ‘ಬಲಿಷ್ಠರೊಂದಿಗೆ ಕಿರಿಕಿರಿ ಮಾಡಿಕೊಂಡರೆ, ನಿಮ್ಮ ಸಾವು ಘೋರವಾಗಿರುತ್ತದೆ – ಸೆಲ್ಯೂಟ್ ಇಂಡಿಯನ್ ಏರ್ ಫೋರ್ಸ್’ ಎಂದು ಟ್ವೀಟ್ ಮಾಡಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಭಾರತೀಯ ವಾಯುಪಡೆಯ ಯೋಧರನ್ನು ಅಭಿನಂದಿಸಿದ್ದಾರೆ.


ಮೆಜರ್ ಸುರೇಂದ್ರ ಪೂನಿಯಾ ಅವರು ಮಾಡಿದ ಟ್ವೀಟ್ ಹೀಗಿದೆ.


ಭಾರತೀಯ ಜನತಾ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿ ಇಂದು ನಮ್ಮ ವಾಯುಪಡೆ ಪಿಒಕೆಯಲ್ಲಿರುವ ಉಗ್ರಶಿಬಿರಗಳ ಮೇಲೆ ದಾಳಿ ಮಾಡಿರುವುದು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಂತಾಗುವುದಿಲ್ಲ ಯಾಕೆಂದರೆ ಅದು ನಮ್ಮದೇ ನೆಲ ಮತ್ತು ಅದನ್ನು ಪಾಕಿಸ್ಥಾನ ಆಕ್ರಮಿಸಿಕೊಂಡಿದೆ.


ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮ ಯೋಧರ ಸಾಹಸವನ್ನು ಪ್ರಶಂಸಿಸಿದ್ದಾರೆ.


ಸೂಪರ್ ಸ್ಟಾರ್ ರಜನಿಕಾಂತ್ ಅವರು ನಮ್ಮ ಯೋಧರ ಸಾಹಸಕ್ಕೆ ‘ಬ್ರಾವೋ ಇಂಡಿಯಾ’ ಎಂದು ಟ್ವೀಟ್ ಮಾಡಿ ಸೈನಿಕರ ಸಾಹಸವನ್ನು ಅಭಿನಂದಿಸಿದ್ದಾರೆ.


ಬಾಲಿವುಡ್ ನಟ ಅಕ್ಷಯ್ ಅವರು ಅವರು ಮಾಡಿರುವ ಟ್ವೀಟ್ ಹೀಗಿದೆ.


ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ನಮ್ಮ ವಾಯುಪಡೆಯ ವೀರ ಯೋಧರ ಸಾಹಸಕ್ಕೆ ಸೆಲ್ಯೂಟ್ ಅಂದಿದ್ದಾರೆ.


ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಟ್ವೀಟ್ ಮೂಲಕ ಭಾರತೀಯ ವಾಯುಪಡೆಯ ಯೋಧರಿಗೆ ಸಲಾಂ ಎಂದಿದ್ದಾರೆ. ‘ನಮ್ಮ ಒಳ್ಳೆಯತನವನ್ನು ನಮ್ಮ ದೌರ್ಬಲ್ಯವೆಂದು ಪರಿಗಣಿಸಬೇಡಿ. ಐ.ಎ.ಎಫ್.ಗೆ ನನ್ನದೊಂದು ಸಲಾಂ’ ಎಂದವರು ತಮ್ಮ ಟ್ವಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.


‘ಸರಿ ತಪ್ಪುಗಳ ನಡುವಿನ ಯುದ್ಧದಲ್ಲಿ ನೀವು ತಟಸ್ಥವಾಗಿರಲು ಸಾಧ್ಯವಿಲ್ಲ, ಹಾಗೆಯೇ ಭಯೋತ್ಪಾದನೆಯ ವಿರುದ್ಧದ ಹೋರಾಟವೂ ಸಹ ಹಾಗೆಯೇ.. ಭಾರತೀಯ ವಾಯುಸೇನೆಯ ಯೋಧರ ಶೌರ್ಯಕ್ಕೆ ನನ್ನ ಸಲಾಂ’ ಎಂದು ನವಜೋತ್ ಸಿಂಗ್ ಸಿದ್ದು ಅವರು ಟ್ವೀಟ್ ಮಾಡಿದ್ದಾರೆ.


ಖ್ಯಾತ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಅವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ನಮ್ಮ ಯೋಧರ ಸಾಹಸಕ್ಕೆ ‘ಜೈ ಹಿಂದ್’ ಅಂದಿದ್ದಾರೆ.


ಕ್ರಿಕೆಟ್ ಆಟಗಾರರಾಗಿರುವ ವಿರೇಂದ್ರ ಸೆಹ್ವಾಗ್ ಮತ್ತು ಯುಜ್ವೇಂದ್ರ ಚಾಹಲ್ ಅವರೂ ಸಹ ನಮ್ಮ ಯೋಧರ ಸಾಹಸಕ್ಕೊಂದು ಸೆಲ್ಯೂಟ್ ಅಂದಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವೀಟ್ ನಲ್ಲ ‘ಬಹಳ ಚೆನ್ನಾಗಿ ಆಡಿದ್ರಿ’ ಎಂದು ಕ್ರಿಕೆಟ್ ಭಾಷೆಯಲ್ಲೇ ನಮ್ಮ ಯೋಧರನ್ನು ಸೆಹ್ವಾಗ್ ಅಭಿನಂದಿಸಿದ್ದಾರೆ. ಇನ್ನು ಸೆಹ್ವಾಗ್ ಬಳಸಿರುವ ಹ್ಯಾಷ್ ಟ್ಯಾಗ್ ಆಕರ್ಷಕವಾಗಿದೆ ‘ಇನ್ನಾದರೂ ಸರಿಯಾಗಿ, ಇಲ್ಲವಾದರೆ ನಾವೇ ಸರಿ ಮಾಡುತ್ತೇವೆ’ (ಸುಧಾರ್ ಜಾವೋ ವರ್ನಾ ಸುಧಾರ್ ದೇಂಗೆ)


ಪತ್ರಕರ್ತೆ ಬರ್ಖಾ ದತ್ ಅವರೂ ಸಹ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಭಾರತೀಯ ವಾಯುದಾಳಿಯ ಯೋಧರ ಸಾಹಸಕ್ಕೆ ಸೆಲ್ಯೂಟ್ ಅಂದಿದ್ದಾರೆ. ಪಾಕಿಸ್ಥಾನ ನೆಲದಲ್ಲಿರುವ ಉಗ್ರಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ವಾಯುದಾಳಿಯನ್ನು ಅವರು ಪ್ರಶಂಸಿದ್ದಾರೆ.

​​​​​​​
ನವರಸನಾಯಕ ನಟ ಜಗ್ಗೇಶ್ ಅವರ ಟ್ವೀಟ್ ಹೀಗಿದೆ.

Advertisement

Udayavani is now on Telegram. Click here to join our channel and stay updated with the latest news.

Next