Advertisement
ಒಂದು ವರ್ಷದ ಅವಧಿಯಲ್ಲಿ ಬರೀ ಮಹಾರಾಷ್ಟ್ರ, ಹಿಮಾಚಲಪ್ರದೇಶವನ್ನೇ ಗಣಿಸಿದರೆ 25 ಕೋಟಿ ರೂ.ಗೂ ಅಧಿಕ ಪ್ರಶಸ್ತಿ ಮೊತ್ತ, ಈ ರಾಜ್ಯಗಳಲ್ಲಿ ನಡೆಯುವ ಕೂಟಗಳ ಮೂಲಕ ಹಂಚಲ್ಪಡುತ್ತದೆ. ಇನ್ನು ಒಟ್ಟಾರೆ ದೇಶದ ಲೆಕ್ಕಾಚಾರ ಬೇರೆಯೇ ಇದೆ. ಈ ವರ್ಷ ಹೆಚ್ಚು ಕಡಿಮೆ 500ಕೂಟಗಳು ರದ್ದಾಗುವುದು ಖಾತ್ರಿ. ಇದನ್ನೇ ನಂಬಿಕೊಂಡಿರುವ ಕುಸ್ತಿಪಟುಗಳು ಏನು ಮಾಡಬೇಕು?
Related Articles
Advertisement
ಆರ್ಥಿಕ ಲೆಕ್ಕಾಚಾರ ಹೇಗೆ?ಹಿಮಾಚಲ, ಮಹಾರಾಷ್ಟ್ರದಲ್ಲಿ ನಡೆಯುವ ಪ್ರತೀ ಕೂಟದಲ್ಲಿ ಒಟ್ಟು ಕನಿಷ್ಠ 2 ಲಕ್ಷ ರೂ., ಗರಿಷ್ಠ 7 ಲಕ್ಷ ರೂ.ವರೆಗೆ ಪ್ರಶಸ್ತಿ ಮೊತ್ತವಿರುತ್ತದೆ. ಇನ್ನು ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲಿ ನಡೆಯುವ ಒಂದೇ ಕೂಟದಲ್ಲಿ 1 ಕೋಟಿ ರೂ. ಪ್ರಶಸ್ತಿ ಮೊತ್ತವಿರುತ್ತದೆ. ಒಟ್ಟು 500 ಕೂಟಗಳ ಮೂಲಕ ನಾವು ಒಟ್ಟು ಪ್ರಶಸ್ತಿ ಮೊತ್ತವನ್ನು ಪಡೆಯಬಹುದು. ಸಾಮಾನ್ಯ ಕುಸ್ತಿಪಟುಗಳ ಸ್ಥಿತಿ ಶೋಚನೀಯ
ದೊಡ್ಡ, ದೊಡ್ಡ ಶ್ರೀಮಂತ ಕುಸ್ತಿಪಟುಗಳು ಈ ಪರಿಸ್ಥಿತಿಯಲ್ಲಿ ಹೇಗೋ ಬಚಾವಾಗುತ್ತಾರೆ. ಆದರೆ ಸಣ್ಣಪುಟ್ಟ, ಬಡ ಕುಸ್ತಿಪಟುಗಳ ಸ್ಥಿತಿ ಶೋಚನೀಯವಾಗುತ್ತದೆ. ಇವರೆಲ್ಲ ಈ ಕುಸ್ತಿಕೂಟಗಳನ್ನು ನಂಬಿಯೇ ಬದುಕುತ್ತಿರುತ್ತಾರೆ. ಇವರಿಗೆ ಬೇರೆ ದಾರಿಯಿರುವುದಿಲ್ಲ. ಅಲ್ಲದೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕುಸ್ತಿಪಟುಗಳಿಗೆ ಸಿಗುವಂತೆ, ಇವರಿಗೆ ಸರ್ಕಾರದಿಂದ ಆರ್ಥಿಕ ನೆರವೂ ಇರುವುದಿಲ್ಲ. ಕುಸ್ತಿಪಟುಗಳು ಪ್ರತೀ ತಿಂಗಳು ಲಕ್ಷ ರೂ.ವರೆಗೆ ಆಹಾರ ಮತ್ತು ಪೌಷ್ಟಿಕಾಂಶಗಳಿಗೆ ಖರ್ಚು ಮಾಡುತ್ತಾರೆ. ಈಗ ಕೂಟ ರದ್ದಾದರೆ ಅದಕ್ಕೆ ಹಣ್ಣ ಹೊಂದಿಸುವುದು ಹೇಗೆ? ಒಂದು ಋತುವಲ್ಲಿ 35 ಲಕ್ಷ ರೂ. ಸಂಪಾದನೆ
ಒಬ್ಬ ಕುಸ್ತಿಪಟು ಉದಾಹರಣೆಗೆ ಮಣ್ಣಿನ ಕುಸ್ತಿಯಲ್ಲಿ ಜನಪ್ರಿಯರಾಗಿರುವ ಬನಿಯ ಅಮೀನ್ ಒಂದು ಋತುವಲ್ಲಿ 35ರಿಂದ 40 ಲಕ್ಷ ರೂ. ದುಡಿ ಯುತ್ತಾರೆ. ಅವರು ಪ್ರತೀ ಬಾರಿ ಕುಸ್ತಿ ನಡೆದಾಗ ಬಹುತೇಕ ಕೂಟಗಳಲ್ಲಿ ಹಾಜರಿರುತ್ತಾರೆ. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದರು. ಈಗ ಅದು ಕೈತಪ್ಪುತ್ತದೆ. ಇನ್ನೊಬ್ಬ ಕುಸ್ತಿಪಟು ಜಸ್ಕನ್ವರ್ ಸಿಂಗ್ ಗಿಲ್ ಇವರು ಯಾವಾಗಲೂ ಪ್ರಶಸ್ತಿ ಜಯಿ ಸುವ ಪಟ್ಟಿಯಲ್ಲಿರುತ್ತಾರೆ. ಇವರು ಎಲ್ಲ ಕಡೆ ಹೋಗುವುದಿಲ್ಲ. ಆದರೂ 25 ಲಕ್ಷ ರೂ. ಕನಿಷ್ಠ ದುಡಿಯುತ್ತಾರೆ. ಈ ಬಾರಿ ಇವರ ಸಂಪಾದನೆಗೂ ಮಣ್ಣು ಬಿದ್ದಿದೆ ಮುಂದೆ ನಡೆಯುತ್ತಾ?
ಮಾರ್ಚ್, ಏಪ್ರಿಲ್, ಮೇ, ಜೂನ್ ಕೂಟಗಳು ರದ್ದಾಗುವುದು ಖಾತ್ರಿ. ಜುಲೈ ನಂತರವಾದರೂ ಕುಸ್ತಿ ಕೂಟಗಳು ನಡೆಯುತ್ತವಾ ಎಂಬ ನಿರೀಕ್ಷೆಯಲ್ಲಿ ಸ್ಪರ್ಧಿಗಳಿದ್ದಾರೆ. ಒಂದು ವೇಳೆ ನಡೆಯದಿದ್ದರೆ ಬಹಳಷ್ಟು ಕುಸ್ತಿಪಟುಗಳು ಬೀದಿಗೆ ಬರು ವುದು ಖಚಿತ.