Advertisement

ಮಹಿಳಾ ಕುಸ್ತಿ ಕೋಚ್‌ ಅಮೆರಿಕಕ್ಕೆ ವಾಪಸ್‌

09:24 AM Mar 21, 2020 | keerthan |

ಹೊಸದಿಲ್ಲಿ: ಭಾರತದ ಮಹಿಳಾ ಕುಸ್ತಿ ತಂಡದ ವಿದೇಶಿ ಕೋಚ್‌ ಆ್ಯಂಡ್ರೂ ಕುಕ್‌ ಅಮೆರಿಕಕ್ಕೆ ವಾಪಸಾಗಿದ್ದಾರೆ. ಕೋವಿಡ್-19 ಕಾರಣದಿಂದ ಲಕ್ನೋ ಮತ್ತು ಸೋನೆಪತ್‌ನಲ್ಲಿ ನಡೆಯಬೇಕಿದ್ದ ಶಿಬಿರಗಳನ್ನು ರಾಷ್ಟ್ರೀಯ ಒಕ್ಕೂಟ ರದ್ದುಗೊಳಿಸಿತ್ತು. ಹೀಗಾಗಿ ಕುಕ್‌ ತವರಿಗೆ ಮರಳಿದರು. ಭಾರತೀಯ ತರಬೇತುದಾರ ಕುಲದೀಪ್‌ ಮಲಿಕ್‌ ಅನಾರೋಗ್ಯದಿಂದಾಗಿ ಹರ್ಯಾಣಕ್ಕೆ ವಾಪಸಾದರು.

Advertisement

ಆ್ಯಂಡ್ರೂ ಕುಕ್‌ ಲಕ್ನೋದ ಸಾಯ್‌ ಸೆಂಟರ್‌ನಲ್ಲಿ ಭಾರತದ ವನಿತಾ ತಂಡದ ಜತೆಗಿದ್ದರು. ಆದರೆ ಇಲ್ಲಿ 4-5 ಮಂದಿಯಷ್ಟೇ ವನಿತಾ ಕುಸ್ತಿಪಟುಗಳಿದ್ದರು. ಕೋವಿಡ್-19 ಭೀತಿಯಿಂದ ಹೋಳಿ ಬಳಿಕ ಯಾರೂ ಸಾಯ್‌ ಕೇಂದ್ರಕ್ಕೆ ಆಗಮಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next