ಕಟಪಾಡಿ: ಅಮೇರಿಕಾದ ಕ್ಯಾಲಿ´ೋರ್ನಿಯಾ, ಮೆಕ್ಸಿಕೊ, ಚಿಲಿ ಸೇರಿದಂತೆ ದೇಶ-ವಿದೇಶಗಳಿಂದ 20 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಗಂಧದ ಕುಡಿ ಚಲನಚಿತ್ರಕ್ಕೆ ಇದೀಗ ಹೆ„ದರಾಬಾದ್‌ನಲ್ಲಿ ನಡೆದ ಇಂಡಿಯನ್ ವರ್ಲ್ಡ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಛಾಯಾಚಿತ್ನಗ್ರಹಣ ಪ್ರಶಸ್ತಿ ಪಡೆಯುವುದು ಮೂಲಕ ಮತ್ತೂಂದು ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಸುದ್ದಿ ಮಾಡಿದೆ.
ಹೆ„ದರಾಬಾದ್‌ನ ಅಮೀರ್ ಪೇಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಮಾರು 24 ದೇಶಗಳ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಭಾರತದಿಂದ ಆಯ್ಕೆಯಾದ ಏಕೈಕ ಚಿತ್ರ ಗಂಧದಕುಡಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಗಳಿಸಿತ್ತು.
ಭಾರತ ಸೇರಿದಂತೆ ಅರ್ಜೆಂಟೆ„ನಾ, ಕೆನಡಾ ಹಾಗೂ ಮಲೇಶ್ಯಾದ ಚಿತ್ರ ನಿರ್ದೇಶಕರು ತೀಪುìಗಾರರಾಗಿ ಭಾಗವಹಿಸಿದ್ದರು. ಅದ್ದೂರಿಯಾಗಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಕೆ. ಸತ್ಯೇಂದ್ರ ಪೈ ಮತ್ತು ಸಹನಿರ್ದೇಶಕಿ ಪ್ರೀತಾ ಮೆನೇಜಸ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇನ್‌ವೆಂಜರ್ ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಗಂಧದ ಕುಡಿ ಚಿತ್ರವನ್ನು ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನ ಮಾಡಿದ್ದಾರೆ.
ಕನ್ನಡದ ಹಿರಿಯ ನಟ ರಮೇಶ್ ಭಟ್, ಶಿವಧ್ವಜ್ ಸೇರಿದಂತೆ ಮುಂಬಯಿ ಹಾಗೂ ಕರಾವಳಿಯ ಕಲಾವಿದರು ಅಭಿನಯಿಸಿರುವ ಈ ಚಿತ್ರ ಹತ್ತು ಹಲವು ವಿಶೇಷತೆಯಿಂದ ಕೂಡಿದೆ. ಈ ಚಿತ್ರಕ್ಕಾಗಿಯೇ ವಿಮಾನ ಆಕೃತಿಯ ಮನೆಯ ಸೆಟ್ ಒಂದನ್ನು ನಿರ್ಮಿಸಿದ್ದು, ಚಿತ್ರದ ಹೆ„ಲೆ„ಟ್ ಆಗಲಿದೆ. ಚಿತ್ರದ ಹಾಡುಗಳ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲೂ ವಿಜಯ ಪ್ರಕಾಶ್ ಹಾಡಿರುವ ಕನ್ನಡ ನಾಡು ಎಂಬ ಹಾಡು ಯೂಟ್ಯೂಬ್‌ನಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆಯುತ್ತಿದೆ.
ಗಂಧದ ಕುಡಿ ಚಿತ್ರವು ಮಾ.29 ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು ಚಿತ್ರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.