ಹೊಸದಿಲ್ಲಿ: ಭಾರತೀಯ ವನಿತಾ ಸಾಫ್ಟ್ ಬಾಲ್ ತಂಡಕ್ಕೆ ಹ್ಯಾಂಗ್‌ಝೂನಲ್ಲಿ ನಡೆಯುವ ಗೇಮ್ಸ್‌ಗೆ ವೈಲ್ಡ್ ಕಾರ್ಡ್ ಸಿಕ್ಕಿರುವ ಕಾರಣ ತಂಡವು ಏಷ್ಯನ್ ಗೇಮ್ಸ್‌ಗೆ ಪದಾರ್ಪಣೆಗೈಯುವುದು ಖಚಿತವಾಗಿದೆ ಎಂದು ಭಾರತೀಯ ಸಾಫ್ಟ್ ಬಾಲ್ ಅಸೋಸಿಯೇಶನ್ ತಿಳಿಸಿದೆ.
ಭಾರತೀಯ ತಂಡದ ವೈಲ್ಡ್‌ಕಾರ್ಡ್ ಪ್ರವೇಶಕೆ ಫೆ. 23ರಂದು ನಡೆದ ಸಾಫ್ಟ್ಬಾಲ್ ಏಷ್ಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ವೈಲ್ಡ್ ಕಾರ್ಡ್ ಮೂಲಕ ಭಾರತೀಯ ವನಿತಾ ತಂಡವು ಏಷ್ಯನ್ ಗೇಮ್ಸ್‌ಗೆ ಪ್ರವೇಶ ಪಡೆಯುತ್ತಿರುವುದು ಭಾರತದ ಬಲುದೊಡ್ಡ ಸಾಧನೆಯಾಗಿದೆ.
ಇದನ್ನೂ ಓದಿ:2ನೇ ಆರ್‌ಟಿಪಿಸಿಆರ್ : ಮಾರ್ಷ್‌ಗೆ ಪಾಸಿಟಿವ್: ಡೆಲ್ಲಿ-ಪಂಜಾಬ್ ಪಂದ್ಯಕ್ಕೆ ತೊಂದರೆ ಇಲ್ಲ
ಸಾಫ್ಟ್ ಬಾಲ್ ಆಟದಲ್ಲಿ ನಮ್ಮ ವನಿತೆಯರು ಪಳಗಲು ಏಷ್ಯನ್ ಗೇಮ್ಸ್ ಉತ್ತಮ ವೇದಿಕೆ ಎಂದು ಹೇಳಲಾಗಿದೆ.
ಏಷ್ಯನ್ ಗೇಮ್ಸ್‌ನಲ್ಲಿ ನಿರ್ವಹಣೆ ನೀಡುವುದು ನಮ್ಮ ಮೊದಲ ಹೆಜ್ಜೆ. ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೊದಲು ಬಲಿಷ್ಠ ತಂಡವನ್ನು ತಯಾರುಗೊಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಭಾರತೀಯ ಸಾಫ್ಟ್ ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ನೀತಲ್ ನಾರಂಗ್ ಅವರು ಹೇಳಿದ್ದಾರೆ.