Advertisement

ಕಾಮನ್ವೆಲ್ತ್ 2022: ರೋಚಕ ಪಂದ್ಯದಲ್ಲಿ ಗೆದ್ದ ವನಿತಾ ಹಾಕಿ ತಂಡಕ್ಕೆ ಕಂಚಿನ ಪದಕ

03:15 PM Aug 07, 2022 | Team Udayavani |

ಬರ್ಮಿಂಗಂ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಕೂಟದ ವನಿತಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಇಂದು ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಜಯ ಗಳಿಸಿತು.

Advertisement

ಸೆಮಿ ಫೈನಲ್ ನಲ್ಲಿ ಆಸೀಸ್ ವಿರುದ್ಧ ಸೋಲನುಭವಿಸಿದ್ದ ಭಾರತ ತಂಡ ಇಂದು ಕಂಚಿನ ಪದಕಕ್ಕೆ ಹೋರಾಟ ನಡೆಸಿತು. ಕಠಿಣ ಸ್ಪರ್ಧೆ ನೀಡಿದ ಎರಡೂ ತಂಡಗಳು ಕೊನೆಯವರೆಗೂ ಹೋರಾಡಿದವು. ಕೊನೆಯ ಕ್ಷಣದವರೆಗೂ ಭಾರತ 1-0 ಅಂತರದ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಅವಕಾಶ ಪಡೆದ ನ್ಯೂಜಿಲ್ಯಾಂಡ್ ಗೋಲು ಗಳಿಸಿತು. 1-1 ರಿಂದ ಸಮಬಲವಾದ ಕಾರಣ ಪಂದ್ಯದ ವಿಜೇತರನ್ನು ನಿರ್ಣಯ ಮಾಡಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.

ಇದನ್ನೂ ಓದಿ:ಹದಿಹರೆಯದ ಬಾಲಕಿಯ ಮೇಲೆ ರೇಪ್ ಆರೋಪ: ಐಟಿಬಿಪಿ ಯೋಧ ಅರೆಸ್ಟ್

ಆದರೆ ಪೆನಾಲ್ಟಿಯಲ್ಲಿ ಭಾರತದ ಗೋಲ್ ಕೀಪರ್ ಸವಿತಾ ಉತ್ತಮ ರಕ್ಷಣೆಯಿಂದ ನ್ಯೂಜಿಲ್ಯಾಂಡ್ ಕೇವಲ ಒಂದು ಗೋಲು ಮಾತ್ರ ಬಾರಿಸಿತು. ಭಾರತ ಎರಡು ಗೋಲು ಬಾರಿಸಿ ಜಯ ಸಾಧಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next