Advertisement

ಹಾಕಿ: ರಾಣಿ ರಾಂಪಾಲ್‌ ನಾಯಕಿ

01:58 AM May 30, 2019 | Team Udayavani |

ಹೊಸದಿಲ್ಲಿ: ಜಪಾನಿನ ಹಿರೋಶಿಮಾದಲ್ಲಿ ಜೂನ್‌ 15ರಿಂದ ಆರಂಭವಾಗುವ ಎಫ್ಐಎಚ್ ವನಿತಾ ಸೀರೀಸ್‌ ಫೈನಲ್ಸ್‌ನಲ್ಲಿ ಪಾಲ್ಗೊಳ್ಳುವ 18 ಸದಸ್ಯರ ಭಾರತೀಯ ವನಿತಾ ತಂಡವನ್ನು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ರಾಣಿ ರಾಂಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಸವಿತಾ ತಂಡದ ಉಪನಾಯಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಿಡ್‌ಫೀಲ್ಡರ್‌ ನಿಶಾ ಅಂತಾರಾಷ್ಟ್ರೀಯ ಸ್ಪರ್ಧೆಗೆ ಪಾದಾರ್ಪಣೆಗೈಯಲಿದ್ದಾರೆ.

Advertisement

ಅನುಭವಿ ಗೋಲ್ಕೀಪರ್‌ಸವಿತಾ ಮತ್ತು ರಜನಿ ಎಟಿಮರ್ಪು ಗೋಲ್ಪೋಸ್ಟ್‌ನ ರಕ್ಷಣೆಯ ಭಾರ ವಹಿಸಲಿದ್ದಾರೆ. ಡಿಫೆಂಡರ್‌ಗಳಾದ ದೀಪ್‌ ಗ್ರೇಸ್‌ ಎಕ್ಕ, ನಿಶಾ, ಗುರ್ಜೀತ್‌ಕೌರ್‌, ಸಲಿಮಾ ಟೆಟೆ ಮತ್ತು ಸುನೀತಾ ಲಾಕ್ರಾ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ಯುವ, ಅನುಭವಿಗಳ ತಂಡ
ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡ ನಮ್ಮ ತಂಡ ಉತ್ತಮ ಸಮತೋಲನದಿಂದ ಕೂಡಿದೆ. ನಿಶಾ ಅವರು ಗಾಯಗೊಂಡ ರೀನಾ ಖೋಕರ್‌ ಅವರ ಜಾಗವನ್ನು ಮಿಡ್‌ಫೀಲ್ಡ್ನಲ್ಲಿ ತುಂಬಲಿದ್ದಾರೆ. ಆ ಸ್ಥಾನಕ್ಕೆ ಸಮರ್ಥ ಎಂಬುದನ್ನು ಅವರು ತರಬೇತಿ ಸಂದರ್ಭ ತೋರಿಸಿಕೊಟ್ಟಿದ್ದರು. ಅಂತಾರಾಷ್ಟ್ರೀಯ ಸ್ಪರ್ಧೆಗೆ ಪಾದಾರ್ಪಣೆಗೈಯಲಿರುವ ನಿಶಾ ಉತ್ತಮ ನಿರ್ವಹಣೆ ನೀಡುವ ಆತ್ಮವಿಶ್ವಾಸ ನನಗಿದೆ ಎಂದು ಮುಖ್ಯ ಕೋಚ್ ಸೋರ್ಡ್‌ ಮರಿನ್‌ ಹೇಳಿದ್ದಾರೆ.

‘ಎ’ ಬಣದಲ್ಲಿ ಭಾರತ
ಭಾರತವು ಪೋಲೆಂಡ್‌, ಉರುಗ್ವೆ ಮತ್ತು ಫಿಜಿ ಜತೆ ‘ಎ’ ಬಣದಲ್ಲಿದ್ದು, ಜೂ. 15ರಂದು ಉರುಗ್ವೆಯನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತ ಜಪಾನ್‌, ಚಿಲಿ, ರಶ್ಯ ಮತ್ತು ಮೆಕ್ಸಿಕೊ ‘ಬಿ’ ಬಣದಲ್ಲಿವೆ.

ಸ್ಪೇನ್‌, ಮಲೇಶ್ಯ ಮತ್ತು ಕೊರಿಯ ಪ್ರವಾಸದ ವೇಳೆ ನಾವು ಬೇರೆ ಬೇರೆ ವಾತಾವರಣದಲ್ಲಿ ಆಡಿದ ಅನುಭವ ಪಡೆದಿದ್ದೇವೆ. ಹೀಗಾಗಿ ನಾವು ಹಾಕಿ ಸೀರೀಸ್‌ ಫೈನಲ್ಸ್ಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಉರುಗ್ವೆ ವಿರುದ್ಧ ಉತ್ತಮ ಆರಂಭ ಪಡೆಯುವ ನಿಟ್ಟಿಯಲ್ಲಿ ಗಮನ ಹರಿಸಲಿದ್ದೇವೆ ಎಂದು ಮರಿನ್‌ ತಿಳಿಸಿದರು.

Advertisement

ಭಾರತೀಯ ವನಿತಾ ತಂಡ
ಗೋಲ್ಕೀಪರ್:
ಸವಿತಾ, ರಜನಿ ಎಟಿಮರ್ಪು. ಡಿಫೆಂಡರ್ : ದೀಪ್‌ ಗ್ರೇಸ್‌ ಎಕ್ಕ, ನಿಶಾ, ಗುರ್ಜೀತ್‌ ಕೌರ್‌, ಸಲಿಮಾ ಟೆಟೆ, ಸುನೀತಾ ಲಾಕ್ರಾ ಮಿಡ್‌ಫೀಲ್ಡರ್ : ಮೋನಿಕಾ, ನಿಕ್ಕಿ ಪ್ರಧಾನ್‌, ಲಿಲಿಮಾ ಮಿಂಜ್‌, ನೇಹಾ ಗೋಯಲ್, ಸುಶೀಲಾ ಚಾನು ಪುಖ್ರಾಂಬಮ್‌. ಫಾರ್ವರ್ಡ್ಸ್‌: ರಾಣಿ ರಾಂಪಾಲ್ (ನಾಯಕಿ), ವಂದನಾ ಕಟಾರಿಯಾ, ನವಜೋತ್‌ ಕೌರ್‌, ನವನೀತ್‌ ಕೌರ್‌, ಲಾಲ್ರೆಮ್ಸಿಯಾಮಿ, ಜ್ಯೋತಿ.

Advertisement

Udayavani is now on Telegram. Click here to join our channel and stay updated with the latest news.

Next