Advertisement

ಹಾಕಿ ಟೆಸ್ಟ್‌: ಕಿವೀಸ್‌ ವಿರುದ್ಧ ಭಾರತಕ್ಕೆ ಹ್ಯಾಟ್ರಿಕ್‌ ಸೋಲು

03:45 AM May 18, 2017 | Team Udayavani |

ಹೊಸದಿಲ್ಲಿ: ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಭಾರತ ಮಹಿಳಾ ಹಾಕಿ ತಂಡ 2-3 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಇದು 5 ಪಂದ್ಯಗಳ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತದ ಹ್ಯಾಟ್ರಿಕ್‌ ವೈಫ‌ಲ್ಯವಾಗಿದೆ. 

Advertisement

ಇದರೊಂದಿಗೆ ಸರಣಿಯನ್ನೂ ಕಳೆದುಕೊಂಡಿತು.ಕಿವೀಸ್‌ ಪರ ಎಲ್ಲಾ ಗುನ್ಸಾನ್‌ (13ನೇ ನಿಮಿಷ), ಡಿಯಾನ (15ನೇ ನಿಮಿಷ) ಹಾಗೂ ಗ್ಲೊಯಾನ್‌ (39 ನೇ ನಿಮಿಷ) ಗೋಲು ದಾಖಲಿಸಿದರು. ಭಾರತದ ಪರ ದೀಪಾ ಗ್ರೇಸ್‌ ಎಕ್ಕಾ 9ನೇ ನಿಮಿಷ ಹಾಗೂ ಮೋನಿಕಾ 59ನೇ ನಿಮಿಷದಲ್ಲಿ ಗೋಲು ಹೊಡೆದರು. ಭಾರತ ಆರಂಭದಲ್ಲೇ ಗೋಲಿನ ಖಾತೆ ತೆರೆದರೂ ಬಳಿಕ ಹಿನ್ನಡೆ ಅನುಭವಿಸುತ್ತ ಹೋಯಿತು.

ಇದು ಕೂಟದಲ್ಲಿ ಭಾರತ ಅನುಭವಿಸಿದ ಸತತ 3ನೇ ಸೋಲು. ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 1-4 ಗೋಲುಗಳಿಂದ, 2ನೇ ಪಂದ್ಯದಲ್ಲಿ ಭಾರತ 2-8 ಗೋಲುಗಳಿಂದ ಸೋಲು ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next