Advertisement

ಹಾಕಿ: ಬೆಲ್ಜಿಯಂ ಪುರುಷರ ವಿರುದ್ಧ ಭಾರತ ವನಿತೆಯರಿಗೆ ಜಯ

11:38 AM Sep 20, 2017 | Team Udayavani |

ಬೆಲ್ಜಿಯಂ: ಗುರ್ಜಿತ್‌ ಕೌರ್‌, ನಾಯಕಿ ರಾಣಿ ರಾಮ್‌ಪಾಲ್‌ ಅವರ ಭರ್ಜರಿ ಆಟದಿಂದಾಗಿ ಭಾರತೀಯ ಮಹಿಳಾ ಹಾಕಿ ತಂಡ ಯೂರೋಪ್‌ ಪ್ರವಾಸದಲ್ಲಿ ಬೆಲ್ಜಿಯಂ ಪುರುಷರ ಕಿರಿಯರ ಹಾಕಿ ತಂಡದ ವಿರುದ್ಧ 4-3 ಗೋಲುಗಳಿಂದ ಜಯ ದಾಖಲಿಸಿದೆ. ಗೆಲುವಿನೊಂದಿಗೆ ಭಾರತ ಪ್ರವಾಸವನ್ನು ಅಂತ್ಯಗೊಳಿಸಿದೆ. ಇದು ಭಾರತಕ್ಕೆ ಕೂಟದಲ್ಲಿ ಸಿಕ್ಕಿದ ಏಕೈಕ ಗೆಲುವೂ ಹೌದು.

Advertisement

ಭಾರತ ತಂಡದ ಪರ ಗುರ್ಜಿತ್‌ ಕೌರ್‌ (7 ಮತ್ತು 11ನೇ ನಿಮಿಷ), ರಾಣಿ ರಾಮ್‌ಪಾಲ್‌ (13 ಮತ್ತು 33ನೇ ನಿಮಿಷ) ತಲಾ ಎರಡು ಗೋಲು ಬಾರಿಸಿ ಗೆಲುವಿಗೆ ಕಾರಣರಾದರು. ಆರಂಭದಿಂದ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ಒಂದರ ಹಿಂದೆ ಒಂದು ಗೋಲು ದಾಖಲಿಸಿತು. ಇದರಿಂದಾಗಿ ಭಾರತ ಒಂದು ಹಂತದಲ್ಲಿ 4-0 ಮುನ್ನಡೆ ಪಡೆದಿತ್ತು. ಆದರೆ ಕೊನೆಯ 2 ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಯುವಕರು ಮೂರು ಗೋಲು ಸಿಡಿಸಿ ಸೋಲಿನ ಅಂತರ ತಗ್ಗಿಸಿಕೊಂಡರು.

ಬೆಲ್ಜಿಯಂ ಪರ ತಿಬಾಲ್ಟ್ ನಿವೆನ್‌ (38ನೇ ನಿಮಿಷ), ವಿಲಿಯಂ ವಾನ್‌ ಡಿಸೆಲ್‌ (42ನೇ ನಿಮಿಷ) ಮತ್ತು ಮಥಾಯಿಸ್‌ ರೆಲಿಕ್‌ (48ನೇ ನಿಮಿಷ) ಒಂದೊಂದು ಗೋಲು ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next